ವಿಷ್ಣು ಶ್ರೀಕೃಷ್ಣನಾಗಿ ಭೂಮಿಯ ಮೇಲೆ ಅವತರಿಸಿದ ಶುಭ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. 2024ರ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26 ರಂದು ಆಚರಿಸಲಾಗುವುದು. ಶ್ರೀ ಕೃಷ್ಣನ ಜನ್ಮಾಷ್ಟಮಿ ಹಬ್ಬವನ್ನ ಬಹಳ ವಿಶೇಷತೆಯಿಂದ ಆಚರಿಸಲಾಗುತ್ತದೆ. ಭಾರತದಾದ್ಯಂತ ವಿಭಿನ್ನವಾಗಿ ಇದನ್ನ ಆಚರಿಸುವ ಪದ್ಧತಿ ಇದೆ. ಪುರಾಣಗಳ ಪ್ರಕಾರ, ದ್ವಾಪರಯುಗದಲ್ಲಿ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನು ಜನಿಸಿದನು, ಆ ದಿನ ಉಪವಾಸ ಮಾಡಲಾಗುತ್ತದೆ.
ಕೃಷ್ಣನ ಪೂಜೆಗೆ ಶುಭ ಸಮಯ:
– ಅಷ್ಟಮಿ ತಿಥಿ ಆರಂಭ: 2024 ರ ಆಗಸ್ಟ್ 26 ರಂದು ಮುಂಜಾನೆ 3:39 ರಿಂದ
– ಅಷ್ಟಮಿ ತಿಥಿ ಮುಕ್ತಾಯ: 2024ರ ಆಗಸ್ಟ್ 27 ರಂದು ಮುಂಜಾನೆ 2:19
– ರೋಹಿಣಿ ನಕ್ಷತ್ರ ಆರಂಭ: 2024 ರ ಆಗಸ್ಟ್ 26 ರಂದು ಮಧ್ಯಾಹ್ನ 3:55
– ರೋಹಿಣಿ ನಕ್ಷತ್ರ ಮುಕ್ತಾಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ನಿಶಿತಾ ಪೂಜಾ ಸಮಯ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:01 ರಿಂದ 12:45 ರವರೆಗೆ
– ಮಧ್ಯರಾತ್ರಿ ಶುಭ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:23 ಕ್ಕೆ
– ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ರೋಹಿಣಿ ನಕ್ಷತ್ರ ಮುಕ್ತಾಯ ಸಮಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:45
– ಚಂದ್ರೋದಯ ಸಮಯ: 2024 ರ ಆಗಸ್ಟ್ 26 ರಂದು ರಾತ್ರಿ 11:20
ಕೃಷ್ಣ ಜನ್ಮಾಷ್ಟಮಿ ಮಹತ್ವ
ಹಿಂದೂಗಳಿಗೆ ಜನ್ಮಾಷ್ಟಮಿ ಬಹಳ ಪ್ರಮುಖವಾದ ದಿನ. ಭಗವಾನ್ ಕೃಷ್ಣನ ಭಕ್ತರು ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ಈ ಅದೃಷ್ಟದ ದಿನದಂದು ಭಗವಾನ್ ವಿಷ್ಣುವಿನ ಅಭಿವ್ಯಕ್ತಿಯಾದ ಶ್ರೀಕೃಷ್ಣನು ಜನಿಸಿದನು. ಶ್ರೀಕೃಷ್ಣನು ವಿಷ್ಣುವಿನ ಒಂಬತ್ತನೇ ಅವತಾರ. ಶ್ರೀಕೃಷ್ಣ ತಂದೆ ತಾಯಿ ವಸುದೇವ ಮತ್ತು ದೇವಕಿಯಾದರೂ ಅವನು ಯಶೋದೆ ಮತ್ತು ನಂದರ ಮಗನಾಗಿ ಬೆಳೆದನು. ಈ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ಹೂವುಗಳು, ಭೋಗಗಳನ್ನಿಟ್ಟು ಪೂಜೆ ಮಾಡುತ್ತಾರೆ. ಈ ದಿನ ಶ್ರೀಕೃಷ್ಣನ ಮಗುವಿನ ರೂಪಕ್ಕೆ ಪೂಜೆ ಮಾಡುವುದು ಸಂಪ್ರದಾಯ.
ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ
ಮುಂಜಾನೆ ಬೇಗ ಎದ್ದು, ಪವಿತ್ರ ಸ್ನಾನ ಮಾಡಿ ಮತ್ತು ಭಕ್ತಿಯಿಂದ ಕಠಿಣ ಉಪವಾಸವನ್ನು ಆಚರಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ.
– ಪೂಜಾ ವಿಧಿವಿಧಾನಗಳನ್ನು ಪ್ರಾರಂಭಿಸುವ ಮೊದಲು ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
– ನಂತರ ಬಾಲ ಗೋಪಾಲನಿಗೆ ನೀರು, ಗಂಗಾಜಲ, ಪಂಚಾಮೃತದಿಂದ ಅಭಿಷೇಕ ಮಾಡಿಸಿ.
– ಶ್ರೀಕೃಷ್ಣನಿಗೆ ಅಲಂಕಾರವನ್ನು ಮಾಡಿ.
– ಹಳದಿ ಚಂದನದ ತಿಲಕವನ್ನು ಇಡಿ.
– ಮರದ ಹಲಗೆಯನ್ನು ತೆಗೆದುಕೊಂಡು ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಹರಡಿ ಅದರ ಮೇಲೆ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆ ,ಮಾಡಿ ಹೂವಿನಿಂದ ಅಲಂಕರಿಸಿ.
– ನಂತರ ಕೃಷ್ಣನ ವಿಗ್ರಹಕ್ಕೆ ತುಳಸಿ ಎಲೆ, ಪಂಚಾಮೃತ, ಸಿಹಿತಿಂಡಿಗಳು ಹಾಗೂ 5 ವಿವಿಧ ರೀತಿಯ ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಅರ್ಪಿಸಿ.
– ಶ್ರೀಕೃಷ್ಣನನ್ನು ಒಲಿಸಿಕೊಳ್ಳಲು 21, 31 ಅಥವಾ 56 ವಿಧದ ಭೋಗಗಳನ್ನು ಅರ್ಪಿಸಿ.
– ಶ್ರೀಕೃಷ್ಣನಿಗೆ ಆರತಿಯನ್ನು ಮಾಡಿ. ಈ ದಿನ ಮಧ್ಯರಾತ್ರಿ ಶ್ರೀಕೃಷ್ಣನನ್ನು ಪೂಜಿಸುವುದು ಹೆಚ್ಚು ಫಲಪ್ರದವಾಗಿರುತ್ತದೆ.
ಕೃಷ್ಣ ಜನ್ಮಾಷ್ಟಮಿ ಮಂತ್ರ
ಓಂ ನಮೋ ಭಗವತೇ ಶ್ರೀ ಗೋವಿಂದಾಯ ನಮಃ
– ಒಂ ನಮೋ ಭಗವತೇ ವಾಸುದೇವಾಯ ನಮಃ
– ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ
ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿರಾಂ
– ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
– ಕೃಂ ಕೃಷ್ಣಾಯ ನಮಃ
– ಓಂ ದೇವಿಕಾನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್
– ಓಂ ಕ್ಲೀಂ ಕೃಷ್ಣಾಯ ನಮಃ
– ಗೋಕುಲನಾಥಾಯ ನಮಃ
ಮುಖ್ಯವಾಗಿ ಜನ್ಮಾಷ್ಟಮಿಯ ದಿನ ತಪ್ಪಿಯೂ ತುಳಸಿ ಎಲೆಗಳನ್ನು ತೆಗೆಯಬೇಡಿ. ಏಕೆಂದರೆ ತುಳಸಿ ಭಗವಾನ್ ವಿಷ್ಣುವಿಗೆ ತುಂಬಾ ಇಷ್ಟವಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ತುಳಸಿ ಎಲೆಗಳನ್ನು ತೆಗೆಯುವುದು ಅಶುಭ. ಈ ದಿನ ಹಸುವನ್ನು ನಿರ್ಲಕ್ಷಿಸಬೇಡಿ. ಶ್ರೀಕೃಷ್ಣನಿಗೆ ಗೋವುಗಳೆಂದರೆ ಬಹಳ ಪ್ರೀತಿ. ಬಾಲ್ಯದಲ್ಲಿ ಹಸುಗಳೊಂದಿಗೆ ಆಟವಾಡುತ್ತಿದ್ದರು. ಜನಪ್ರಿಯ ನಂಬಿಕೆಯ ಪ್ರಕಾರ, ಈ ದಿನದಂದು ಹಸುವನ್ನು ಪೂಜಿಸುವುದರಿಂದ ಶ್ರೀಕೃಷ್ಣನ ಕೃಪೆ ಸಿಗಲಿದೆ. ಯಾವುದೇ ಮಾಂಸಾಹಾರವನ್ನು ತಿನ್ನಬಾರದು ಅಥವಾ ಮನೆಗೆ ತರಬಾರದು. ಮೀನು, ಮಾಂಸ, ಮದ್ಯ ಅಥವಾ ವೈನ್ ಅನ್ನು ಸಹ ಮನೆಗೆ ತರಬಾರದು.ಆದಷ್ಟು ಯಾರ ಮೇಲೆಯೇ ಕೋಪಗೊಳ್ಳಬೇಡಿ, ಅಗೌರವದಿಂದ ನೋಡಿಕೊಳ್ಳಬೇಡಿ. ಬಡವರಾಗಲಿ ಶ್ರೀಮಂತರಾಗಲಿ ಎಲ್ಲ ಭಕ್ತರೂ ಕೃಷ್ಣನಿಗೆ ಸಮಾನರು. ಮರಗಳನ್ನು ಕಡಿಯುವುದು ಕೂಡ ಅಶುಭ. ಕೃಷ್ಣ ಎಲ್ಲದರಲ್ಲೂ ವಾಸಿಸುತ್ತಾನೆ. ಅಲ್ಲದೆ, ಸಾಧ್ಯವಾದರೆ, ಈ ದಿನ ಹೆಚ್ಚು ಮರಗಳನ್ನು ನೆಡಬೇಕು. ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ ಎಂಬ ನಂಬಿಕೆ.

