ಯೂರೋಪ್ : ಜರ್ಮನಿ ದೇಶದ ಎರ್‌ಲಾಂಗನಲ್ಲಿ ಬಸವ ಸಮಿತಿ ಯೂರೋಪ್ ವತಿಯಿಂದ 12‑ನೇ ಶತಮಾನದ ಸಮಾಜ ಸುಧಾರಕ ಶ್ರೀ ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಮೇ 31 ನೇ ಶನಿವಾರ 11.30 ರಿಂದ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಯೋಜಿಸಲಾಗುತ್ತಿದೆ ಹಾಗೂ ಶ್ರೀ ಬಸವಣ್ಣನವರ ಅನುಯಾಯಿಗಳ ಸಮ್ಮಿಲನ ಏರ್ಪಡಿಸಲಾಗಿದೆ. ಇದು ಎಲ್ಲ ಬಸವ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ.
ವಿಶ್ವಗುರು ಬಸವಣ್ಣ ಜಾತಿವಾರ್ಯವನ್ನು ತೊಡೆದು ಹಾಕಿ, ಲಿಂಗಸಮಾನತೆಯನ್ನು ಪ್ರಚಾರಿಸಿ, “ಕಾಯಕವೇ ಕೈಲಾಸ” ಎಂಬ ಸಂದೇಶವನ್ನು ಸಂಕ್ಷಿಪ್ತ ವಚನಗಳ ಮೂಲಕ ಹರಡಿದವರು. ಯುರೋಪಿನ ಹಲವು ದೇಶಗಳಿಂದ ಬಸವ ಭಕ್ತರು ಒಗ್ಗೂಡಿ ಎರಡು ವರ್ಷಗಳ ಸತತ ಪ್ರಯತ್ನದಿಂದ ಬಸವ ಸಮಿತಿ ಯುರೋಪ್ ಎಂಬ ಸಂಘವನ್ನು ಸ್ಥಾಪಿಸಿದ್ದಾರೆ. ಈ ಸಂಘದ ೧೧ ಕಾರ್ಯಕಾರಿ ಸಮಿತಿಯ ಸದಸ್ಯರು ಜರ್ಮನಿ, ಬೆಲ್ಜಿಯಂ, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಫ್ರಾನ್ಸ್ ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಸಂಘದ ಬೆನ್ನೆಲುಬಾಗಿ ಸನ್ಮಾನ್ಯ ಶ್ರೀ ಶಂಕರ ಮಹದೇವ ಬಿದರಿ , ಭಾ.ಪೋ.ಸೇ. (ನಿ) – ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರು, ಸನ್ಮಾನ್ಯ ಶ್ರೀ ಡಾ. ಸಿ. ಸೋಮಶೇಖರ್ ಭಾ.ಅ.ಸೇ(ನಿ) – ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು, ಸನ್ಮಾನ್ಯ ಶ್ರೀಮತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ – ಶರಣ ಸಾಹಿತ್ಯ ಚಿಂತಕಿ ಮತ್ತು ಹೃದ್ರೋಗ ತಜ್ಞೆ, ಬೆಂಗಳೂರು. ಇವರ ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ.
ಮ್ಯೂನಿಖ್, ಮ್ಯಾಗ್ಡೆಬರ್ಗ್, ಫ್ರಾಂಕ್‌ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಬೆಂಬಲ ನೀಡುತ್ತಿದ್ದು ಸಕ್ರಿಯವಾಗಿ ಭಾಗವಹಿಸುತ್ತಿವೆ. 150‑ಕ್ಕಿಂತ ಅಧಿಕ ಬಸವ ಭಕ್ತರು ಹಾಗೂ ಅವರ ಕುಟುಂಬದವರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸಮಾರಂಭವನ್ನು ಬೇರೆ‑ಬೇರೆ ದೇಶಗಳ ನಗರಗಳಲ್ಲಿ ನಡೆಸುವ ಯೋಜನೆ ಇದೆ.
ಈ ಪವಿತ್ರ ಕಾರ್ಯಕ್ಕೆ ಮ್ಯೂನಿಖ್‌ನ ಭಾರತೀಯ ರಾಯಭಾರಿ ಕಚೇರಿ, ಆಸ್ಲಾಂಡರ್ ಇಂಟಿಗ್ರೇಶನ್ ಬೈರತ್‑ಎರ್‌ಲಾಂಗನ್, ಐಸಿಎಫ್ ತಂಡ, ನಟ್ರಾಸ್ ನಾಟ್ಯ ತಂಡ, ಓಂ ಧೋಲ್ ತಾಶಾ, ಮಾತಂಗಿ ನೃತ್ಯ ತಂಡ, ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್, ಭಾವತರಂಗ ಸಂಗೀತ ತಂಡ ಕೈಜೋಡಿಸುತ್ತಿವೆ.
ಶ್ರೀ ಬಸವೇಶ್ವರ ಮೆರವಣಿಗೆ (ಓಂ ಧೋಲ್ ತಾಶಾ, ಲೆಜಿಮ್ ನೃತ್ಯರು, ನಟ್ರಾಸ್ ತಂಡ), “ಬಸವನ ಭಾಷೆಗಳು” ಪುಸ್ತಕ ಬಿಡುಗಡೆ (ವಿನ್‌ಶಿ ಫೌಂಡೇಶನ), ದಾಸೋಹ ಕಾರ್ಯಕ್ರಮ, ಮಕ್ಕಳಿಂದ ವಚನ ವಾಚನ, ವಚನ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ, ಅತಿಥಿಗಳ ಸನ್ಮಾನ ಮತ್ತು ಕೃತಜ್ಞತಾ ಸಮಾರಂಭ, ವಚನ ಗಾಯನ ಮತ್ತು ಸಂಗೀತ ಸಂಜೆ – ಭಾವತರಂಗ ತಂಡದಿಂದ ಕಾರ್ಯಕ್ರಮ ನಡೆಯಲಿದೆ.
ಪುಸ್ತಕದ ಲೇಖಕರು: ವಿನ್‌ಶಿ ಫೌಂಡೇಶನ್, ಶರಣ ವಿನಯ ಶಿರಹಟ್ಟಿಮಠ ಮತ್ತು ಶರಣೆ ಶಿಲ್ಪಾ ಶಿರಹಟ್ಟಿಮಠ. ದಾಸೋಹದ ರುವಾರಿಗಳು: ವಿನಯ ಶಿರಹಟ್ಟಿಮಠ, ಶಿಲ್ಪಾ ಶಿರಹಟ್ಟಿಮಠ, ವಿವೇಕ, ಉಷಾ, ಪ್ರದೀಪ, ದಿಲೀಪ. ಸಾಂಸ್ಕೃತಿಕ ಹಾಗೂ ಆತಿಥ್ಯ ವ್ಯವಸ್ಥಾಪಕರು: ಪ್ರಿಯಾ, ನಂದಿನಿ, ಶಿಲ್ಪಾ, ಶೀಲಾ, ಗುರುರಾಜ್ ಮಹಿಷಿ, ರಾಜೀಶ್ ಮೇಲ್ಪರಂಬಿಲ, ಶ್ರೀನಿವಾಸ ವೆಂಕಟೇಶಮೂರ್ತಿ, ದೀಪ್ತಿ. ಕಾರ್ಯಕ್ರಮದ ಪ್ರಾಯೋಜಕರು: ಸೋಮನಗೌಡ ಪಾಟೀಲ್, ಸಿಮ್ರಾನ್ ಮಾಮಿ, ಭರತ ಗೌಡ, ಪ್ರದೀಪ ಚೌಹಾಣ್, ರಮೇಶ್ ರಾಮಾನುಜಂ, ಆಶಾ ರಮೇಶ್, ಸಂಜಯ್, ಅಮರ್ ಮುನ್ನೋಳ್ಳಿಮಠ
ಕಾರ್ಯಕಾರಿ ಸಮಿತಿ: ಪಂಚಾಕ್ಷರಿ ಲಕ್ಷ್ಮೇಶ್ವರಮಠ – ಪೋಲೆಂಡ್, ಪ್ರಶಾಂತ ಶಿವನಾಗಣ್ಣ – ಪೋಲೆಂಡ್, ಹೇಮೇಗೌಡ ರುದ್ರಪ್ಪ – ಇಟಲಿ, ನವೀನ್ ಓದೊಗೌಡ್ರ – ಇಟಲಿ, ಸತೀಶ ಪಲ್ಲೇದ – ಆಸ್ಟ್ರಿಯಾ , ದೀಪಕ್ ಜಗದೀಶ್ ಗೋಶ್ವಾಲ್ – ಬೆಲ್ಜಿಯಂ, ಸಂಜಯ್ ಗೊಡಬನಹಾಳ ಪ್ರಸನ್ನಕುಮಾರ – ಫ್ರಾನ್ಸ್, ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ – ಜರ್ಮನಿ, ಪ್ರಿಯಾ ಚಂದ್ರಶೇಖರ – ಜರ್ಮನಿ, ವೇದ ಕುಮಾರಸ್ವಾಮಿ – ಜರ್ಮನಿ, ಶಶಿಕಾಂತ ಗ. ಗುಡ್ಡದಮಠ – ಜರ್ಮನಿ.
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಅಥವಾ ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ:
Basava Samithi Europe
✉️ [email protected]
PayPal: @BasavaSamithiEurope

