ಅಬುಧಾಬಿ:  ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿ ಗುರುವಂದನಾ ಮತ್ತು ಸಂಸ್ಕೃತಿ ಸಿಂಚನ ಕಾರ್ಯಕ್ರಮ ಮೇ 31ಮೇ 2025 ರಂದು ನಡೆಸಲಾಯಿತು.

ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಪರಮ ಪೂಜ್ಯ ಮಠಾಧಿಪತಿಗಳು ಹಾಗೂ ಗಣ್ಯಾತಿ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸುಮಂಗಲೆಯರಿಂದ ಪೂರ್ಣ ಕುಂಭ, ವೇದಘೋಷ, ಪಂಚವಾಧ್ಯಗಳೊಂದಿಗೆ ಬಿ.ಎ.ಪಿ.ಎಸ್. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ಸನಾತನ ಸಾಂಸ್ಕೃತಿ, ಕಲಾ ಆಧ್ಯಾತ್ಮಿಕ, ಗುರು ಪರಂಪರೆಯ ಕಾರ್ಯಕ್ರಮವನ್ನು ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪರಮ ಪೂಜ್ಯ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು

ಡಾ ಬಿ. ಆರ್. ಶೆಟ್ಟಿಯವರಿಗೆ ” ಸಂಸ್ಕಂತಿ ಗೋಲ್ಡನ್ ಹಾರ್ಟ್ ಅವಾರ್ಡ್” ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಮಾನವ ಹಿತೈಷಿ ಡಾ. ಬಿ. ಆರ್. ಶೆಟ್ಟಿಯವರು ಅಬುಧಾಬಿಗೆ 1974ರಲ್ಲಿ ಬಂದು ತಮ್ಮ ಸ್ವಂತ ಸಾಮ್ರಾಜ್ಯ ಕಟ್ಟಿದವರು. ಎನ್.ಎಂ.ಸಿ. ಹೆಲ್ತ್ ಕೇರ್ ಯು.ಎ.ಇ. ಎಕ್ಸೆಚಂಜ್, ನಿಯೋ ಫಾರ್ಮಾ, ಲಂಡನ್ ಸ್ಟಾಕ್ ಎಕ್ಸೆಚಂಜ್, ಬಿ.ಆರ್.ಎಸ್. ವೆಂಚರ್ ಇತ್ಯಾದಿ ಹಲವಾರು ವಿಶ್ವ ದರ್ಜೆ ಸಂಸ್ಥೆಗಳನ್ನು ಸ್ಥಾಪಿದ್ದರು. ಡಾ. ಬಿ.ಆರ್. ಶೆಟ್ಟಿಯವರು ಐವತ್ತು ಸಾವಿರಕಿಂತಲೂ ಹೆಚ್ಚು ಮಂದಿ ಭಾರತೀಯರ ಜೊತೆಗೆ ಇನ್ನಿತರ ದೇಶದ ಪ್ರಜೆಗಳಿಗೂ ಉದ್ಯೋಗ ನೀಡಿ ಲಕ್ಷಾಂತರ ಮಂದಿಗೆ ಅನ್ನದಾತರಾಗಿದ್ದಾರೆ.

“ಆರ್ಡರ್ ಅಫ್ ಅಬುಧಾಬಿ” ಅಬುಧಾಬಿ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪಡೆದಿರುವ ಡಾ. ಬಿ ಆರ್ ಶೆಟ್ಟಿಯವರು, ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪ್ರವಾಸಿ ಭಾರತೀಯ ಸಮ್ಮಾನ್ ಇನ್ನೂ ಹಲವಾರು ಪ್ರತಿಷ್ಠಿತ ಸನ್ಮಾನ ಗೌರವಗಳನ್ನು ಪಡೆದಿದ್ದಾರೆ. ಜಾರ್ಜೀಯಾ ಸ್ಟೇಟ್ ಯೂನಿವರ್ಸಿಟಿ ಅಟ್ಲಾಂಟಾ ಮತ್ತು ಯು.ಎಸ್.ಎ. ಅಂಡ್ ಮಿಡ್ಲೆಸಕ್ಸ್ ಯೂನಿವರ್ಸಿಟಿ ದುಬಾಯಿ, ಡಾ. ಬಿ ಆರ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಬುಧಾಬಿ ಹಿಂದೂ ಮಂದಿರದ ನಿರ್ಮಾಣದ ಪ್ರಥಮ ಹಂತದ ರುವಾರಿಗಳಲ್ಲಿ ಪ್ರಮುಖ ಪಾತ್ರವಹಿದವರು. ಭಾರತದ ಪ್ರಧಾನ ಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಡಾ ಬಿ. ಆರ್. ಶೆಟ್ಟಿಯವರು ಅಬುಧಾಬಿ ಸರ್ಕಾರದಿಂದ ಹಿಂದೂ ಮಂದಿರ ನಿರ್ಮಾಣಕ್ಕೆ ಇಪ್ಪಾತಾರು ಏಕರೆ ಭೂಮಿ ಪಡೆಯುವಲ್ಲಿ ವಿಶೇಷ ಪ್ರಯತ್ನ ಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಬುಧಾಬಿಯ ತಮ್ಮ ಬಂಗಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.