ಶಿವಮೊಗ್ಗ: ಕೋಳಿ ಜ್ವರಕ್ಕೂ ಮೊಟ್ಟೆಗೂ ಸಂಬಂಧ ಇಲ್ಲ. ಮೊದಲಿಂದಲೂ ಮೊಟ್ಟೆ ಹಂಚಿಕೆ ಮಾಡಲಾಗುತ್ತಿದೆ. ಕೆಲವರು ಕೋಳಿ ಸಹ ತಿನ್ನುತ್ತಿದ್ದರು. ಈ ಬಗ್ಗೆ ಆರೋಗ್ಯ ಇಲಾಖೆಯವರ ಜತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು. ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ.
ಅವರ ಜೀವನದಲ್ಲೇ ಕನ್ನಡ ಕಲಿತಿರುವುದಿಲ್ಲ. ಅವರಿಗೆ ಒಂದೇ ಬಾರಿ ಕನ್ನಡ ಕಲಿಯಿರಿ ಎಂದರೆ ಆಗುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದರು.

