ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಸುದ್ದಿ ತಿಳಿದುಬಂದಿದೆ.

ಪ್ರಕರಣವೊಂದರಲ್ಲಿ‌ ಜೈಲಿನಲ್ಲಿರುವ ಆರೋಪಿ ಡಿಚ್ಚಿ ಮುಬಾರಕ್ ಎನ್ನುವಾತಲೇ ಬಸವೇಶನ ಹತ್ಯೆಗೆ ಸುಫಾರಿ ನೀಡಿದ್ದು, ಭದ್ರಾವತಿ ಗಾಂಧಿ ಸರ್ಕಲ್​ನಲ್ಲಿ ಕೊಲೆ ಮಾಡಲು ಸೂಚಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಹತ್ಯೆಗೆ ಚಾಕು ಖರೀದಿಸಿದ್ದ ಮುಬಾರಕ್​, ಕೃತ್ಯಕ್ಕೆ ಕಾರು, ನಾಲ್ವರನ್ನ ಕಳುಹಿಸಿದ್ದ ಎಂದು ತಿಳಿದು ಬಂದಿದೆ.

ಬಸವೇಶನನ್ನು ಕೊಲೆ ಮಾಡುವ ಬಗ್ಗೆ ಮುಬಾರಕ್, ಗುತ್ತಿಗೆದಾರ ಸುನೀಲ್ ಎಂಬಾತನಿಗೆ ಹೇಳಿದ್ದ. ಇದನ್ನು ಸುನೀಲ್ಆ ಗಸ್ಟ್ 19 ರಂದು ಭದ್ರಾವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸುನೀಲ್ ನೀಡಿದ ದೂರು ಆಧರಿಸಿ ಭದ್ರಾವತಿ ಹಳೆನಗರ ಠಾಣೆಯ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.