ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಇರುತ್ತದೆ ಇದೀಗ ಒಂದು ಹೊಸ ಫೀಚರ್ಸ್‌ನ್ನು ಬಳಕೆದಾರರ ಪರಿಚಯಿಸುವುದರ ಮೂಲಕ ಸಿಹಿಸುದ್ದಿ ನೀಡಿದೆ.
ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ. ಈವರೆಗೂ ಒಂದು ಬಾರಿಗೆ 30 ಸೆಕೆಂಡ್ ಮಿತಿ ಇರುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಇತ್ತು ಆದರೆ ಇದೀಗ 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಆ ಮೂಲಕ ಧೀರ್ಘ ಅವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.
ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ಸ್ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್ ಮಾಡುವ ಮೂಲಕ ಹೊಸ ಫೀಚರ್ ಬಳಸಬಹುದಾಗಿದೆ.

