ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲು ದಾರಿ ಮುಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಸುನಿತಾ ವಿಲಿಯಮ್ಸ್ ವಾಪಸಾತಿಗೆ ಸಂಬಂಧಿಸಿ ಅಪ್‌ಡೇಟ್ ನೀಡುತ್ತಿರುವ ನಾಸಾ ಇದೀಗ ಖಷಿಯ ಸುದ್ದಿಯನ್ನ ನೀಡಿದೆ.
ಬೋಯಿಂಗ್ನ ಸ್ಟಾರ್ಲೈನ್ ಬಾಹ್ಯಾಕಾಶ ನೌಕೆ ಶೀಘ್ರದಲ್ಲೇ ವಾಪಸ್ ಆಗಲು ಹಾರಾಟ ನಡೆಸಲಿದೆ. ಸಂಕಷ್ಟಕ್ಕೆ ಸಿಲುಕಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಆರ್ಸಿಆರ್ ಪರೀಕ್ಷೆಯು ಯಶಸ್ವಿಯಾಗಿದೆ. ಇಬ್ಬರು ಸರಿಯಾಗಿಯೇ ರೆಸ್ಪಾನ್ಸ್ ಮಾಡಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ನೌಕೆಗೆ ಸಂಬಂಧಿಸಿ ಕೆಲವು ಪರೀಕ್ಷೆಗಳನ್ನು ಮಾಡಲಾಯಿತು. ಅದು ಕೂಡ ಯಶಸ್ವಿಯಾಗಿದೆ ಎಂದು ನಾಸಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ, ಮುಂದಿನ ವಾರ ನಡೆಯಲಿರುವ ಹಾರಾಟದ ಪರೀಕ್ಷಾ ಸಿದ್ಧತೆಯೂ ಪೂರ್ಣಗೊಂಡಿದೆ. ಹಾಟ್ ಫೈರ್ ಟೆಸ್ಟ್ನ ಡೇಟಾವನ್ನೂ ಪರಿಶೀಲನೆ ಮಾಡಲಾಗಿದೆ. ಆದರೆ ಅವರು ವಾಪಸ್ ಆಗುವ ದಿನಾಂಕವನ್ನು ಇನ್ನೂ ಪ್ರಕಟವಾಗಿಲ್ಲ. ಆಗಸ್ಟ್ನಲ್ಲಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲಿದ್ದಾರೆ.

