ಜನಪ್ರಿಯ ಕಂಪನಿಯಾದ ಸ್ಯಾಮ್​​ಸಂಗ್​​ ಹೊಸ ಆಫರ್​ ತೆರೆದಿಟ್ಟಿದೆ. ಇದರ ಮೂಲಕ 8.22 ಕೋಟಿ ರೂಪಾಯಿ ಗೆಲ್ಲಬಹುದಾಗಿದೆ. ಯಾರು ಬೇಕಾದರೂ ಈ ಅವಕಾಶವನ್ನು ಪಡೆಯಬಹುದಾಗಿದೆ.

ಸ್ಯಾಮ್​ಸಂಗ್​​ ಸೌತ್​ ಕೊರಿಯಾದ ಜನಪ್ರಿಯ ಕಂಪನಿ. ಇದೀಗ ಈ ಕಂಪನಿ ಮೊಬೈಲ್​ ಸೆಕ್ಯುರಿಟಿ ವಿಚಾರವಾಗಿ ಸಾಫ್ಟ್​​ವೇರ್​ನಲ್ಲಿ ಸಮಸ್ಯೆಯನ್ನು ಹುಡುಕಲು ಬಯಸುತ್ತಿದೆ. ಅದಕ್ಕಾಗಿ ಸಾಮಾನ್ಯರಿಗೆ ಮತ್ತು ನುರಿತರಿಗೆ ಸಾಫ್ಟ್​​ವೇರ್​ನಲ್ಲಿ ಸಮಸ್ಯೆ ಕಂಡುಹಿಡಿದರೆ 1 ಮಿಲಿಯನ್​ ಬಹುಮಾನವಾಗಿ ಪಡೆಯಬಹುದು ಎಂದು ತಿಳಿಸಿದೆ.

ಸ್ಯಾಮ್​​​ಸಂಗ್​​ ಬ್ಲಾಗ್​ ಪೋಸ್ಟ್​ನಲ್ಲಿ ತಿಳಿಸಿರುವಂತೆ, ಭದ್ರತಾ ಸಂಶೋಧಕರು ಮತ್ತು ಇತರರು ತಮ್ಮ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್​​ ಮತ್ತು ಎಕ್ಸಿಕ್ಯೂಶನ್​ಗೆ ಸಂಬಂಧಿಸಿದಂತೆ ಭದ್ರತಾ ನ್ಯೂನತೆಗಳು ಮತ್ತು ದುರ್ಬಲತೆಗಳಿದ್ದರೆ ಕಂಡು ಹಿಡಿಯಿರಿ ಎಂದು ತಿಳಿಸಿದೆ. ಆ ಮೂಲಕ ಹಣವನ್ನು ಪಡೆಯಿರಿ ಎಂದು ಹೇಳಿದೆ.

ನ್ಯೂನತೆಯನ್ನು ಕಂಡುಹಿಡಿಯುವುದರ ಜೊತೆಗೆ ಡೇಟಾ ಹೊರತೆಗೆಯುವುದು, ಸಾಧನಗಳನ್ನು ಅನ್​ಲಾಕ್​​ ಮಾಡುವುದು, ಅನಿಯಂತ್ರಿಕ ಅಪ್ಲಿಕೇಶನ್​​ ಸ್ಥಾಪಿಸುವುದು. ಸಾಧನಗಳ ಸುರಕ್ಷತೆಯನ್ನು ಬೈಪಾಸ್​ ಮಾಡುವ ವಿಚಾರಗಳನ್ನು ಒಳಗೊಂಡು ಕೆಲಸ ಮಾಡಬೇಕಿದೆ ಎಂದು ಸ್ಯಾಮ್​​ಸಂಗ್​​ ತಿಳಿಸಿದೆ. ಕಂಪನಿಯು ಬಗ್​ ಬೌಂಟಿ ಕಾರ್ಯಕ್ರಮ ಮೂಲಕ ಈ ಆಫರ್​ ಅನ್ನು ತೆರೆದಿಟ್ಟಿದೆ. ವಿಜೇತರಿಗೆ 8.22 ಕೋಟಿ ರೂಪಾಯಿ ಸಿಗಲಿದೆ.