ಸ್ಯಾಮ್ಸಂಗ್ ಕಂಪನಿ ಕುರಿತು ಐಫಿಕ್ಸಿಟ್ ಮಾಡಿದ ವರದಿಯೊಂದು ಗ್ರಾಹಕರ ಅಚ್ಚರಿಗೆ ಕಾರಣವಾಗಿದೆ. ಸ್ಯಾಮ್ಸಂಗ್ ಸದಾ ಆವಿಷ್ಕಾರದಲ್ಲಿ ತೊಡಗಿರುವ ಕಂಪನಿ. ಪ್ರಸ್ತುತ ಜಗತ್ತಿಗೆ ಈ ಕಂಪನಿ ಗ್ಯಾಲಕ್ಸಿ ಸ್ಮಾರ್ಟ್ರಿಂಗ್ ಅನ್ನು ಉತ್ಪಾದಿಸಿ ಪರಿಚಯಿಸಿದೆ. ಇದನ್ನು ಕೈ ಬೆರಳಿಗೆ ಉಂಗುರದಂತೆ ಧರಿಸುವ ಮೂಲಕ ಸ್ಮಾರ್ಟ್ ಆಗಿ ಕೆಲಸ ಮಾಡಬಹುದಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಸ್ಮಾರ್ಟ್ರಿಂಗ್ ಆರೋಗ್ಯದ ಕಾಳಜಿಯನ್ನು ವಹಿಸುತ್ತದೆ.
ಆರೋಗ್ಯದ ಡೇಟಾವನ್ನು ಒದಗಿಸುತ್ತದೆ. ಆದರೆ ಬೇಸರದ ಸಂಗತಿ ಎಂದರೆ ಸ್ಮಾರ್ಟ್ರಿಂಗ್ ಹಾನಿಗೊಳಗಾದರೆ ಅಥವಾ ಬ್ಯಾಟರಿ ಹಾನಿಯಾದರೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಐಫಿಕ್ಸಿಟ್ ವರದಿ ಮಾಡಿದೆ.
ಗ್ಯಾಲಕ್ಸಿ ಸ್ಮಾರ್ಟ್ರಿಂಗ್ ಹಾಳಾದರೆ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಐಫಿಕ್ಸಿಟ್ ತನ್ನ ವರದಿಯಲ್ಲಿ ಹೇಳಿದೆ. ಮಾತ್ರವಲ್ಲದೆ ಅದಕ್ಕೆ ಕಾರಣವನ್ನು ಬಿಚ್ಚಿಟ್ಟಿದೆ. ರಿಂಗ್ನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಯೇ ಪ್ರಮುಖ ಕಾರಣವಾಗಿದೆ. ಸ್ಮಾರ್ಟ್ರಿಂಗ್ನಲ್ಲಿ ಕಾಣಿಸುವ ಬ್ಯಾಟರಿಯು 400mAh ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಬ್ಯಾಟರಿ ಹಾಳಾದರೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಬ್ಯಾಟರಿ ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ.

