ದಿನ ದಿನಕ್ಕೂ ನಮ್ಮಂತೆ ತಂತ್ರಜ್ಞಾನವೂ ಬೆಳವಣಿಗೆಯನ್ನು ಕಾಣುತ್ತಿದೆ, ಈಗಾಗಲೇ ಹಲವು ದೇಶಗಳಲ್ಲಿ ವಿವಿಧ  ತಂತ್ರಜ್ಞಾಗಳನ್ನು ಅಭಿವೃದ್ದಿಪಡಿಸಲಾಗಿದೆ. ಇದೀಗ ಸೌತ್‌ ಕೋರಿಯಾ ಇನ್‌ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್ ನ ಸಂಶೋಧಕರು ಮನಸ್ಸನ್ನು ನಿಯಂತ್ರಿಸಬಲ್ಲ ತಂತ್ರಜ್ಞಾನ ಅಭಿವೃದ್ದಿಪಡಿಸಿದ್ದಾರೆ.

ಇದು ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ದೂರದಿಂದಲೇ ಮೆದುಳನ್ನು ನಿರ್ವಹಿಸುತ್ತದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಲು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಇಲಿಗಳ ಮೇಲೆ ಹಸಿವು ಕಡಿಮೆ ಮಾಡುವಂಥಾ ಪ್ರಯೋಗ ಮಾಡಲಾಯಿತು. ಹೀಗೆ ಪ್ರಯೋಗ ಮಾಡಿದಾಗ ಅವುಗಳ ದೇಹದ ತೂಕದಲ್ಲಿ ಶೇ 10 ಅಂದರೆ 4.3 ಗ್ರಾಂ ನಷ್ಟವಾಗಿದೆ ಎಂದಿದ್ದಾರೆ ವಿಜ್ಞಾನಿಗಳು.

ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ನಿರ್ದಿಷ್ಟ ಮೆದುಳಿನ ಪ್ರದೇಶಗಳನ್ನು ಮುಕ್ತವಾಗಿ ನಿಯಂತ್ರಿಸುವ ವಿಶ್ವದ ಮೊದಲ ತಂತ್ರಜ್ಞಾನ ಇದಾಗಿದೆ ಎಂದು ರಸಾಯನಶಾಸ್ತ್ರ ಮತ್ತು ನ್ಯಾನೊಮೆಡಿಸಿನ್ ಪ್ರಾಧ್ಯಾಪಕರರು ಹೇಳಿದ್ದಾರೆ.

“ಮೆದುಳಿನ ಕಾರ್ಯಗಳು, ಅತ್ಯಾಧುನಿಕ ಕೃತಕ ನರಗಳ ಜಾಲಗಳು, ಟುವೇ ಮೆದುಳಿನ-ಕಂಪ್ಯೂಟರ್ ಇಂಟರ್ಫೇಸ್ ತಂತ್ರಜ್ಞಾನಗಳು ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಹೊಸ ಚಿಕಿತ್ಸೆಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದಿದ್ದಾರೆ ಡಾ ಚಿಯೋನ್.