ಐಫೋನ್‌, ಈ ಫೋನ್ ಕೊಳ್ಳಬೇಕೆಂಬುದು ಹಲವರ ಕನಸಾಗಿರುತ್ತದೆ. ಆ್ಯಪಲ್‌ನ ಹೊಸ ಉತ್ಪನ್ನವು ವಿಶ್ವಾದ್ಯಂತ buzz ಅನ್ನು ಸೃಷ್ಟಿಸುತ್ತದೆ. ಹೊಸ ಮಾದರಿಯ ಐಫೋನ್ ಮಾರುಕಟ್ಟೆಗೆ ಬಂದ ತಕ್ಷಣ ಗ್ರಾಹಕರು ಅದನ್ನು ಖರೀದಿಸುತ್ತಿದ್ದಾರೆ.

ಆ್ಯಪಲ್​ ಇಂಟಲಿಜೆನ್ಸ್ ನೊಂದಿಗೆ ಬರುತ್ತಿರುವ ಐಪೋನ್​ ಕ್ಯಾಮರಾ ಕಂಟ್ರೋಲ್​ ಹಾಗೂ ಕ್ಯಾಪ್ಚರ್​ ಬಟನ್​ನೊಂದಿಗೆ ಕಾಲಿಟ್ಟಿದೆ. ವರ್ಷದ ಪ್ರಾರಂಭಲ್ಲಿ ಘೋಷಿಸಿದ್ದಂತೆ ಐಪೋನ್​ 16, ಐಪೋನ್​ 16 ಪ್ಲಸ್​, ಐಪೋನ್​ 16 ಪ್ರೋ ಮತ್ತು ಐಪೋನ್​ 16 ಪ್ರೋ ಮ್ಯಾಕ್ಸ್​ಗಳನ್ನು ರಿಲೀಸ್ ಮಾಡಿದೆ.

ಐಫೋನ್ 16 ಮಾರಾಟದಲ್ಲಿ ರತನ್ ಟಾಟಾ ಮಾಲೀಕತ್ವದ ಟಾಟಾ ಗ್ರೂಪ್ ಎಂಟ್ರಿಕೊಟ್ಟಿದೆ. ಟಾಟಾ ಗ್ರೂಪ್ ಮಾಲೀಕತ್ವದ ಬಿಗ್‌ಬಾಸ್ಕೆಟ್ ಇದೀಗ ಐಫೋನ್ 16 ಮಾರಾಟಕ್ಕೆ ಇಳಿದಿದೆ. ಇದರಿಂದ ಜಸ್ಟ್ 10 ನಿಮಿಷದಲ್ಲಿ ಐಫೋನ್‌ 16 ನಿಮ್ಮ ಕೈಸೇರುತ್ತೆ.

ಬಿಗ್‌ಬಾಸ್ಕೆಟ್ ಆಹಾರ ಪದಾರ್ಥಗಳ ವಿತರಣೆ ಮೂಲಕ ಹೆಚ್ಚು ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆಗೂ ಪ್ರವೇಶಿಸಿದೆ. ಇದೀಗ ಐಫೋನ್ 16 ಸೀರಿಸ್ ಫೋನ್ ವಿತರಣೆ ಆರಂಭಿಸಿದೆ.

ಟಾಟಾ ಗ್ರೂಪ್‌ನ ಬಿಗ್‌ಬಾಸ್ಕೆಟ್ ಐಫೋನ್ 16 ಬುಕ್ ಮಾಡಿದ 10 ನಿಮಿಷದಲ್ಲಿ ಡೆಲಿವರಿ ಮಾಡಲಿದೆ. ಇನ್ನು ಬಿಗ್‌ಬಾಸ್ಕೆಟ್ ಮೂಲಕ ಐಫೋನ್ ಖರೀದಿಸುವ ಗ್ರಾಹಕರಿಗೆ ಆ್ಯಪಲ್ ಸ್ಟೋರ್ ಬೆಲೆಯಲ್ಲೇ ಲಭ್ಯವಿದೆ.

ಹೀಗಾಗಿ ಗ್ರಾಹಕರಿಗೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗದಂತೆ ಬಿಗ್‌ಬಾಸ್ಕೆಟ್ ನೋಡಿಕೊಂಡಿದೆ. ನಗರ ಪ್ರದೇಶಗಲ್ಲಿ ಬಿಗ್‌ಬಾಸ್ಕೆಟ್ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ನಗರದ ಜನರು ಬಿಗ್‌ಬಾಸ್ಕೆಟ್ ಮೂಲಕ 10 ನಿಮಿಷದಲ್ಲಿ ಐಫೋನ್ 16 ಸೀರಿಸ್ ಪಡೆಯಲು ಸಾಧ್ಯವಿದೆ.