ಗೂಗಲ್‌ ಪಿಕ್ಸಲ್‌ ಫೋನ್‌ ಮತ್ತು ವಾಚ್‌ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಗೂಗಲ್‌ ಸಜ್ಜಾಗಿದೆ. ಹೌದು, ಗೂಗಲ್ ಪಿಕ್ಸೆಲ್ 9 ಸರಣಿ ಮತ್ತು ಪಿಕ್ಸೆಲ್ ವಾಚ್ 3 ಖರೀದಿಗೆ ಅದೆಷ್ಟೋ ಜನರು ಕಾದು ಕುಳಿತಿದ್ದಾರೆ.

ಈ ನೂತನ ಮೊಬೈಲ್ ಮತ್ತು ವಾಚ್‌ ಆಗಸ್ಟ್ 13ರಂದು ಗ್ರಾಹಕರ ಕೈ ಸೇರಲಿದೆ. ಗೂಗಲ್ ಪಿಕ್ಸೆಲ್ 9 ಶ್ರೇಣಿಯು ನಾಲ್ಕು ಮಾದರಿಗಳನ್ನು ಹೊಂದಿರುತ್ತದೆ. Google Pixel 9, Google Pixel 9 Pro, Google Pixel 9 Pro XL ಮತ್ತು Google Pixel 9 Pro Fold ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಪಿಕ್ಸೆಲ್ 9 ಮಾದರಿಗಳು ಮುಂದಿನ ಪೀಳಿಗೆಯ Tensor G4 ಪ್ರೊಸೆಸರ್‌ ಹೊಂದಿದೆ. ಇದು ಸುಗಮ ಕಾರ್ಯಕ್ಷಮತೆ ಮತ್ತು ಸುಧಾರಿತ AI ಸಾಮರ್ಥ್ಯಗಳನ್ನು ದೃಢಪಡಿಸುತ್ತದೆ. Pixel 9 Pro XL 16GB RAM ನೊಂದಿಗೆ ಬರಬಹುದು.

ಇನ್ನು Google Pixel Watch 3 ಈ ಹಿಂದೆ ಲಾಂಚ್‌ ಆಗಿರುವ ವಾಚ್‌ಗಳಲ್ಲಿ ಕಂಡುಬರುವ 1.2-ಇಂಚಿನ ಡಿಸ್ಲ್ಪೇ ಗಾತ್ರವನ್ನು ಹೊಂದಿರುವ ನಿರೀಕ್ಷೆಯಿದೆ. ಹೊಸ ಸೇರ್ಪಡೆ ಎಂದರೆ, ಪಿಕ್ಸೆಲ್ ವಾಚ್ 3 XL , ದೊಡ್ಡ 1.45-ಇಂಚಿನ ಡಿಸ್ಪ್ಲೇ ಮತ್ತು ದಪ್ಪವಾದ ಬಾಡಿಯನ್ನು 45mm x 45mm x 13.89mm ಅಳತೆಯನ್ನು ಹೊಂದಿರುತ್ತದೆ. ಎರಡೂ ಮಾದರಿಗಳು ದೊಡ್ಡ ಬ್ಯಾಟರಿ ಮತ್ತು ಪಿಂಗಾಣಿಯಂತಹ (Porcelain) ಹೊಸ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

Google Pixel 9 ಸರಣಿಯು US ನಲ್ಲಿ ಆಗಸ್ಟ್ 13 ರಂದು ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು Google ಇಂಡಿಯಾ ಎಕ್ಸ್‌ (ಹಿಂದಿನ ಪೋಸ್ಟ್‌) ನಲ್ಲಿ ದೃಢಪಡಿಸಿದೆ.

— Google (@Google) June 25, 2024