ಮುಂಬೈ: ದುಬಾರಿ ಬೆಲೆಯ ಮೊಬೈಲ್‌ ಬುಕ್‌ ಮಾಡಿದ್ದೆ. ಆದರೆ, ಅರ್ಧ ಡಜನ್‌ ಟೀ ಲೋಟಗಳನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿ ಮುಂಬೈನ ವ್ಯಕ್ತಿಯೊಬ್ಬರು ಇ-ಕಾಮರ್ಸ್‌ ವಲಯದ ದೈತ್ಯ ಕಂಪನಿ ‘ಅಮೆಜಾನ್‌’ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೃಹತ್‌ ಮುಂಬೈ ವಿದ್ಯುತ್‌ ಸರಬರಾಜು ನಿಗಮದಲ್ಲಿ ಎಂಜಿನಿಯರ್‌ ಆಗಿರುವ ಅಮರ್‌ ಚೌಹಾಣ್‌ ಅವರೇ ದೂರು ನೀಡಿರುವ ವ್ಯಕ್ತಿ. ₹54,999 ಬೆಲೆಯ ಟೆಕ್ನೊ ಫ್ಯಾಂಥಮ್‌ ವಿ ಫೋಲ್ಡ್‌ ಮೊಬೈಲ್‌ ಅನ್ನು ಜುಲೈ 13ರಂದು ಆರ್ಡರ್‌ ಮಾಡಿದ್ದೆ. ಎರಡು ದಿನಗಳ ನಂತರ ಪಾರ್ಸೆಲ್‌ ಬಂತು. ತೆರೆದು ನೋಡಿದಾಗ 6 ಟೀ ಲೋಟಗಳಿರುವುದನ್ನು ಕಂಡು ಆಘಾತವಾಯಿತು ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಅಮೆಜಾನ್‌ ಅವರನ್ನೂ ಸಂಪರ್ಕಿಸಿದೆ. ಆದರೆ, ಅವರಿಂದ ಸಮಾಧಾನಕರ ಉತ್ತರವೇನೂ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.