ಬೆಂಗಳೂರು : ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ʻಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ʼನ ʻಕೃಷಿ ಉಪಕರಣಗಳ ವಿಭಾಗವುʼ (ಫಾರ್ಮ್‌ ಎಕ್ವಿಪ್‌ಮೆಂಟ್‌ ಸೆಕ್ಟರ್‌-ಎಫ್‌ಇಎಸ್) ಹೊಸ 6 ಸಾಲು ಭತ್ತದ ನಾಟಿ ಯಂತ್ರವನ್ನು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ 4ಆರ್‌ಒ ವಾಕ್ ಬಿಹೈಂಡ್‌ ನಾಟಿಯಂತ್ರ (ಎಂಪಿ 461) ಮತ್ತು 4 ಆರ್​ಒ ರೈಡ್-ಆನ್ (ಪ್ಲಾಂಟಿಂಗ್ ಮಾಸ್ಟರ್ ಪ್ಯಾಡಿ 4 ಆರ್​ಒ) ಅನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ, ಮಹೀಂದ್ರಾ ಅವರ ಹೊಸ ʻ6ಆರ್​ಒ ಪ್ಯಾಡಿ ವಾಕರ್ʼ ಭತ್ತದ ನಾಟಿ ಯಂತ್ರವು ಭತ್ತ ನಾಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹೀಂದ್ರಾದ ಸ್ಥಿತಿಗತಿಯನ್ನು ಹೆಚ್ಚಿಸಿದೆ.

ಹೊಸ ʻಮಹೀಂದ್ರಾ 6 ಆರ್​ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರವು ಅತ್ಯುತ್ತಮ ಆಪರೇಟರ್ ದಕ್ಷತೆ ಒದಗಿಸುತ್ತದೆ. ನಿಖರತೆ ಮತ್ತು ಪರಿಣಾಮಕಾರಿ ನಾಟಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಭತ್ತದ ಕೃಷಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ.

ಏಕಕಾಲದಲ್ಲಿ ಆರು ಸಾಲುಗಳಲ್ಲಿ, ಒಂದೇ ಪಾಸ್ ನಲ್ಲಿ ಏಕರೂಪದ ನಾಟಿ ಮಾಡಲು ಇದು ಅವಕಾಶ ಕಲ್ಪಿಸಲಿದೆ. ಶಕ್ತಿ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಿ, ಹೊಸ ಭತ್ತ ನಾಟಿ ಯಂತ್ರವನ್ನು ತಯಾರಿಸಲಾಗಿದ್ದು, ಇದು ಹೆಚ್ಚು ಬಾಳಿಕೆ ಬರುವ ಗೇರ್‌ಬಾಕ್ಸ್ ಮತ್ತು 4-ಲೀಟರ್ ಸಾಮರ್ಥ್ಯದೊಂದಿಗೆ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ