ಶ್ರೀಹರಿಕೋಟ: ಹೆಮ್ಮೆಯ ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಊರಿದೆ. ಆಂಧ್ರ ಪ್ರದೇಶದ ಶೀಹರಿಕೋಟದಿಂದ ಬೆಳಗ್ಗೆ 9.17ಕ್ಕೆ ಸರಿಯಾಗಿ ಭೂ ವೀಕ್ಷಣಾ ಕಿರು ಉಪಗ್ರಹವನ್ನು (EOS-08) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಪರಿಸರದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಸುಮಾರು 176 ಕೆ.ಜಿ. ತೂಕದ ಭೂ ವೀಕ್ಷಣಾ ಕಿರು ಉಪಗ್ರಹ ಎಸ್‌ಎಸ್‌ಎಲ್‌ವಿ-ಡಿ3 ಇಒಎಸ್‌-08ರ ಉಡಾವಣೆ ಮಾಡಲಾಗಿದೆ. ಬೆಳಗ್ಗೆ 8:50ರಿಂದಲೇ ಇಸ್ರೋ ಸಂಸ್ಥೆ ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್ ಇದಾಗಿದೆ. ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಣೆ ನಡೆಸಲಿದೆ.

ಈ ಭೂ ವೀಕ್ಷಣಾ ಕಿರು ಉಪಗ್ರಹ ಒಂದು ವರ್ಷ ಕಾರ್ಯ ನಿರ್ವಹಿಸಲಿದೆ. ಎಸ್‌ಎಸ್‌ಎಲ್‌ವಿ ಮೂರು ಹಂತಗಳ ಕಡಿಮೆ ವೆಚ್ಚದ ಉಡ್ಡಯನ ವಾಹನ ಇದಾಗಿದೆ. ಸಣ್ಣ ಉಪಗ್ರಹ ಉಡಾವಣ ವಾಹನ ಈ ಉಪಗ್ರಹವನ್ನು ಹೊತ್ತೊಯ್ದಿದೆ. ಇದು ಎಸ್‌ಎಸ್‌ಎಲ್‌ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿದೆ. ಬಾಹ್ಯಾಕಾಶಕ್ಕೆ ಕೇವಲ 500 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಎಸ್‌ಎಸ್‌ಎಲ್‌ವಿ ಯನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಅದನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

ಆಗಸ್ಟ್ 7, 2022ರಂದು ಮೊದಲ ಉಡಾವಣೆ ಮಾಡಲಾಗಿತ್ತು. ಫೆಬ್ರವರಿ 10, 2023ರಂದು ಎರಡನೇ ಎಸ್ಎಸ್ಎಲ್‌ವಿ ಅಭಿವೃದ್ಧಿ ಹಾರಾಟ ನಡೆದಿತ್ತು. ಇಂದು ಮೂರನೇ ಹಾಗೂ ಅಂತಿಮ D3 ಉಡಾವಣೆ ಮಾಡಲಾಗಿದೆ. ಈ ಬಗ್ಗೆ ಇಸ್ರೋ ಸಂಸ್ಥೆಯೂ ಅಧಿಕೃತವಾಗಿ ಮಾಹಿತಿ ನೀಡಿದೆ.

🇮🇳 @isro @NSIL_India 📢

🚀 #SSLVD3
🗓️ 16 Aug 2024
🕰️ 09:17 IST / 03:47 UTC
📍 1st Launch Pad (FLP), SDSC, Sriharikota, India.
🛰️ #EOS08 & @spacerickshaw's #SR0#ISRO #SpaceRickshaw pic.twitter.com/mlnKIeDQei

— SRI SAIDATTA (@nssdatta) August 16, 2024