ನವದೆಹಲಿ: ಆಪಲ್ ಕಂಪನಿಯು ಐಫೋನ್‌ನ ಮುಂಬರುವ 18ರ ಸರಣಿಯನ್ನು ಬಿಡುಗಡೆ ಮಾಡುವ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸೆ.9ರಂದು ಲಾಂಚ್ ನಡೆಯಲಿದೆ. ಈ ವೇಳೆ ಹಲವು ಹೊಸ ಪ್ರಾಡಕ್ಟ್‌ಗಳು ರಿಲೀಸ್ ಆಗಲಿದ್ದು, ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಕುರಿತು ಆಪಲ್ ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಲಾಂಚ್ ಇವೆಂಟ್ ನಡೆಯಲಿದೆ.

ಐಫೋನ್ ಪ್ರಿಯರು ಸೆ.9ರಂದು ಐಫೋನ್ 18ರ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದು, ಆದರೆ ಕಂಪನಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಬದಲಾಗಿ ಏನೆಲ್ಲಾ ಬಿಡುಗಡೆಯಾಗಬಹುದು ಎಂಬ ಪಟ್ಟಿ ಬಿಡುಗಡೆ ಮಾಡಿದ್ದು, ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್, ಐಫೋನ್ ಫೋಲ್ಡ್, ಆಪಲ್ ವಾಚ್ ಸೀರಿಸ್ 12, ಆಪಲ್ ವಾಚ್ ಅಲ್ಟ್ರಾ 4, ಏರ್‌ಪಾಡ್ 6, ಐಪ್ಯಾಡ್ ಮಿನಿ, ಹೋಮ್‌ಪಾಡ್ ಮಿನಿ 2, ಆಪಲ್ ಟಿವಿ 4ಕೆ, ಆಪಲ್ ಹೋಮ್ ಹಬ್ ಬಿಡುಗಡೆಯಾಗುವ ಸಾಧ್ಯತೆಯಿದೆ.

— Apple Hub (@theapplehub) August 26, 2026