ನವದೆಹಲಿ : 100 ಕೋಟಿ ರೂಪಾಯಿ ಆರ್ಡರ್ ಅನುಸಾರವಾಗಿ ಭಾರತೀಯ ಸೇನೆಗೆ ಡ್ರೋನ್ ವ್ಯವಸ್ಥೆ ಪೂರೈಕೆಯನ್ನು ಪ್ರಾರಂಭಿಸಿರುವುದಾಗಿ ಇಂಜಿನಿಯರಿಂಗ್ ಪರಿಹಾರಗಳನ್ನು ಒದಗಿಸುವ ಆಕ್ಸಿಸ್ಕೇಡ್ಸ್ ಟೆಕ್ನಾಲಜೀಸ್ ಸಂಸ್ಥೆಯು ಸೋಮವಾರ ಹೇಳಿದ.
ಬೆಮಗಳೂರು ಮೂಲದ ಆಕ್ಸಿಸ್ಕೇಡ್ಸ್ ಏರೋಸ್ಪೇಸ್, ಡಿಫೆನ್ಸ್, ಹೆವಿ ಇಂಜಿನಿಯರಿಂಗ್, ಆಟೋಮೋಟಿವ್ ಮತ್ತು ಎನರ್ಜಿ ಮುಂತಾದ ಕ್ಷೇತ್ರಗಳಿಗೆ ಸೇವೆ ಒದಗಿಸುವ ಪ್ರಮುಖ ಎಂಡ್ ಟು ಎಂಡ್ ಇಂಜಿಯರಿಂಗ್ ಮತ್ತು ತಂತ್ರಜ್ನಾನ ಪರಿಹಾರ ಪೂರೈಕೆದಾರ ಸಂಸ್ಥೆಯಾಗಿದೆ. ಮ್ಯಾನ್ ಪೋರ್ಟಬಲ್ ಕೌಂಟರ್ ಡ್ರೋನ್ ಸಿಸ್ಟಮ್‌ಅನ್ನು ಆಕ್ಸಿಸ್ಕೇಡ್ಸ್ ಅಭಿವೃದ್ಧಿಪಡಿಸಿದೆ ಎಂದು ಕಂಪನಿಯ ಪ್ರಕಟನೆ ತಿಳಿಸಿದೆ.
ಇದು ಮ್ಯಾನ್ ಪೋರ್ಟಲ್ ವಿಭಾಗದಲ್ಲಿ ಭಾರತೀಯ ರಕ್ಷಣಾ ಪಡೆಗಳಿಗೆ ಸೇರ್ಪಡೆಗೊಳ್ಳುತ್ತಿರುವ ಮೊದಲ ಕೌಂಟರ್ ಡ್ರೋನ್ ಸಿಸ್ಟಮ್ ಆಗಿದೆ. ಈ ವ್ಯವಸ್ಥೆಯನ್ನು ಭಾರತೀಯ ಸೇನೆಯ ವಿವಿಧ ಕಮಾಂಡ್‌ಗಳಲ್ಲಿ ಅನೇಕ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ.

