ನವದೆಹಲಿ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಬಿಸಿನೆಸ್‌ಗಾಗಿ ಭಾರತೀಯ ಗ್ರಾಹಕರಿಗೆ ದೃಢೀಕೃತ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಮೆಟಾ ಕಂಪನಿ ಬುಧವಾರ ಪರಿಚಯಿಸಿದೆ. ಈ ಕುರಿತು ಕಳೆದ ವರ್ಷ ಭಾರತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಹಾಗಾಗಿ ಈ ವರ್ಷ ಫೇಸ್‌ಬುಕ್, ಇನ್ ಸ್ಟಾಗ್ರಾಮ್‌ಗಳಿಗೆ ಮೆಟಾ ದೃಢೀಕೃತ ಚಂದದಾರಿಕೆಗಳನ್ನು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಬೆಂಬಲದೊಂದಿಗೆ ನೀಡುವುದಾಗಿ ಮೆಟಾ ಹೇಳಿದೆ.
ಈ ಪ್ಲ್ಯಾನ್ ಒಂದು ತಿಂಗಳಗೆ 639 ರೂ.ನಿಂದ ಶುರುವಾಗುತ್ತದೆ ಮತ್ತು ಆರಂಭದ ರಿಯಾಯಿತಿಯೊಂದಿಗೆ ಎರಡೂ ಆ್ಯಪ್‌ಗಳಿಗೆ ತಿಂಗಳಿಗೆ 21,000 ರೂ.ವರೆಗೂ ಹೆಚ್ಚಲಿದೆ. ಚಂದಾದರಿಕೆ ಪಡೆದ ಬಳಕೆದಾರರಿಗೆ ಅಧಿಕೃತ ಬ್ಲೂಟಿಕ್ ದೊರೆಯಲಿದೆ. ಇದರ ಜತೆಗೆ ಹೆಚ್ಚಿನ ಫೀಚರ್‌ಗಳನ್ನು ಒದಗಿಸಲಿದೆ.
ದೃಢೀಕೃತ ಚಂದಾದಾರರಿಗೆ ಚಾಟ್ ಅಥವಾ ಇ-ಮೇಲ್ ಸೇವೆ, ಕಾಲ್ ಬ್ಯಾಕ್ ಸರ್ವೀಸ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒದಗಿಸುತ್ತದೆ. ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ವ್ಯಾಪಾರ ನಡೆಸುವವರಿಗೆ ಹೆಚ್ಚಿನ ಅನುಕೂಲ ತಂದುಕೊಡಲಿದೆ.

