ರಾಜದಂಡ ಸೆಂಗೋಲ್ ಕುರಿತು ಕಾಂಗ್ರೆಸ್‌ ಅಪಸ್ವರಕ್ಕೆ ತಿರುವಾವುಡುತುರೈ ಮಠಾಧೀಶರ ಆಕ್ರೋಶ

ಚೆನ್ನೈ: ರಾಷ್ಟ್ರ ರಾಜಧಾನಿಯ ಹೊಸ ಸಂಸತ್ ಭವನದಲ್ಲಿ ಇಡಲಾಗುವ ರಾಜದಂಡ ಸೆಂಗೋಲ್ ಕುರಿತು ಕಾಂಗ್ರೆಸ್‌ನ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ‘ಮಠ’ದ ಮಠಾಧೀಶರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೆಂಗೋಲ್ ಅನ್ನು 1947 ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಮತ್ತು ಇದು ತಮಿಳುನಾಡಿನ ಹೆಮ್ಮೆ ಹೇಳಿದ್ದಾರೆ.

ಶುಕ್ರವಾರದಂದು, “ಸೆಂಗೊಲ್” ಬಗ್ಗೆ “ಸುಳ್ಳು ನಿರೂಪಣೆ” ಹರಡಿದೆ ಎಂದು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು. ಲಾರ್ಡ್ ಮೌಂಟ್ ಬ್ಯಾಟನ್, ಸಿ. ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು ಸೆಂಗೊಲ್‌ ಬಗ್ಗೆ ವಿವರಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲಿತ ಪುರಾವೆಗಳಿಲ್ಲ ಎಂದು ಹೇಳಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ತಿರುವವುಡುತುರೈ ಅಧೀನಂ (ಮಠ)ದ ಮಠಾಧೀಶರು, “ಕೆಲವರು ಹಬ್ಬಿಸುತ್ತಿರುವ ಸುಳ್ಳುಗಳಿಂದ ನಾವು ನಿರಾಶೆಗೊಂಡಿದ್ದೇವೆ, ಇದು ತಮಿಳುನಾಡಿಗೆ ದೊಡ್ಡ ಹೆಮ್ಮೆಯಾಗಿದೆ, ಸೆಂಗೋಲ್ ಚೋಳರ ನಾಡು ತಿರುವವುಡುತುರೈ ಅಧೀನಂನಿಂದ ಕೊಂಡು ಹೋಗಲಾಗಿತ್ತು. “ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸೆಂಗೋಲ್ ಸ್ವೀಕರಿಸಲಿದ್ದಾರೆ. ಹೊಸ ಸಂಸತ್ತಿನ ಕಟ್ಟಡದಲ್ಲಿ ಇದನ್ನು ಸ್ಥಾಪಿಸಲಾಗುವುದು. ಇದು ನಮಗೆ ಸಂತೋಷ ತಂದಿದೆ. ನಮ್ಮನ್ನು ದೆಹಲಿಗೆ ಆಹ್ವಾನಿಸಲಾಗಿದೆ ಮತ್ತು ನಾವು ಅಲ್ಲಿಗೆ ಹೋಗುತ್ತೇವೆ” ಎಂದು ಅವರು ಹೇಳಿದರು. ಅದೇ ಸೆಂಗೋಲ್ ಅನ್ನು ಹಲವು ವರ್ಷಗಳಿಂದ ಮರೆಮಾಡಲಾಗಿತ್ತು ಎಂದು ತಿರುವವುಡುತುರೈ ಅಧೀನಂ ಮಠಾಧೀಶರು ಹೇಳಿದರು.

ಈಗ ಅದನ್ನು ಮತ್ತೆ ಬೆಳಕಿಗೆ ತರಲಾಗುತ್ತಿದೆ, ಹೊಸ ಸಂಸತ್ತಿನ ಉದ್ಘಾಟನೆಯ ಬಗ್ಗೆ 1-2 ತಿಂಗಳ ಹಿಂದೆ ನಮಗೆ ತಿಳಿಸಲಾಯಿತು.

“1947 ರಲ್ಲಿ ದಿವಂಗತ ಪಿಎಂ ಜವಾಹರಲಾಲ್ ನೆಹರು ಅವರಿಗೆ ಸೆಂಗೋಲ್ ನೀಡಲಾಯಿತು. ರಾಜಾಜಿ (ಸಿ ರಾಜಗೋಪಾಲಾಚಾರಿ) ಸ್ವಾತಂತ್ರ್ಯ ಮತ್ತು ಭಾರತದ ಸ್ವಾತಂತ್ರ್ಯವನ್ನು ಹೇಗೆ ಸಂಕೇತಿಸಬೇಕೆಂದು ಕೇಳಿದರು. ಆ ಸಮಯದಲ್ಲಿ ನಮ್ಮ ಪ್ರಧಾನ ಮಠಾಧೀಶರು ಸೆಂಗೋಲ್ ಮಾಡಲು ವುಮ್ಮಿಡಿ ಬಂಗಾರು ಜ್ಯುವೆಲರ್ಸ್ಗೆ ಕೇಳಿಕೊಂಡಿದ್ದರು ಎಂದು ತಿರುವಾವುಡುತುರೈ ಅಧೀನಂ ಮಠಾಧೀಶರು ಹೇಳಿದ್ದಾರೆ.

“ಸೆಂಗೊಲ್ ಅನ್ನು ದೆಹಲಿಗೆ ವಿಮಾನದಲ್ಲಿ ಕಳುಹಿಸಲಾಯಿತು ಮತ್ತು ಅದನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ನೀಡಲಾಯಿತು. ನಂತರ ಅದನ್ನು ಅಧೀನಂ ಮಠಾಧೀಶರು ಆಗಿನ ಪಿಎಂ ನೆಹರೂಗೆ ಹಸ್ತಾಂತರಿಸಿದರು” ಎಂದು ಅವರು ಮಠಾಧೀಶರು ಹೇಳಿದ್ದಾರೆ.

Gayathri SG

Recent Posts

ರಾಧಾ ರಮಣ ಧಾರವಾಹಿಯ ಜನಪ್ರಿಯ ನಟಿ ಪವಿತ್ರ ಜಯರಾಂ ನಿಧನ

ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಅವರು ನಿಧನರಾಗಿದ್ದಾರೆ.

8 mins ago

ಹಣ್ಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ನೀಡಿ ಚಿತ್ರಹಿಂಸೆ

ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…

30 mins ago

ಮಾಜಿ ಸಿಎಂ ಎಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ: ಕಾಂಗ್ರೆಸ್​ ಶಾಸಕ

ಹೆಚ್​ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…

42 mins ago

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

1 hour ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

1 hour ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

1 hour ago