ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕತ್ತೆ ಹಾಲಿನ ಮಾರಾಟ

ತುಮಕೂರು: ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು ಎಂದು ಕೂಗಿದ್ದೇ ತಡ ಮಕ್ಕಳಿರುವ ಮನೆಯಿಂದ ತಾಯಂದಿರು ಓಡೋಡಿ ಬಂದು ಹಾಲು ಖರಿದಿಸಿ ತಕ್ಷಣ ಮಕ್ಕಳಿಗೆ ಕುಡಿಸುತ್ತಿದ್ದರು.

ಹೌದು ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆ.ಸಿ.ಪಾಳ್ಯದಲ್ಲಿ ಶನಿವಾರ ಕಂಡು ಬಂದ ದೃಶ್ಯ. ಕತ್ತೆ ಹಾಲು ಆರೋಗ್ಯಕ್ಕೆ ಶ್ರೇಷ್ಠ ಎಂಬ ಹೇಳಿಕೆ, ವದಂತಿಗಳಿಂದಾಗಿ ಜನರು ಕತ್ತೆ ಹಾಲು ಕುಡಿಯುತ್ತಿದ್ದಾರೆ. ಕತ್ತೆ ಎಂಬ ಪ್ರಾಣಿಯನ್ನು ನಿಕೃಷ್ಟವಾಗಿಸಿರುವ ಜನರು ಈಗ ಕತ್ತೆಯ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಸೃಷ್ಠಿಸಿದೆ.

ಅಂದ ಹಾಗೆ ಕತ್ತೆ ಹಾಲು ಎಂದರೆ ಅರ್ಧ ಲೀಟರ್‌ನಷ್ಟು ಸಿಗುವುದಿಲ್ಲ. ಗ್ರಾಹಕರ ಎದುರೇ ಕತ್ತೆಯ ಹಾಲು ಕರೆದು ಕೊಡಲಾಗುತ್ತದೆ. ಒಂದು ವಳಲೆ ಹಾಲಿಗೆ 50 ರೂ ನಿಗಧಿ ಮಾಡಿದ್ದಾರೆ. 3 ವಳಲೆಗೆ ಡಿಸೌಂಟ್ ಮಾಡಿ 100 ರೂ.ಗೆ ಮಾರುತ್ತಿದ್ದರು. ಕತ್ತೆಗಳಿಂದ ಹೆಚ್ಚು ಹಾಲು ಉತ್ಪತ್ತಿಯಾಗುವುದಿಲ್ಲವಾದ್ದರಿಂದ ಲಭ್ಯವಾಗುವ ಹಾಲನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್. ನಿಂದ ಅರ್ಧ ಲೀಟರ್ ಹಾಲು ನೀಡುತ್ತದೆ. ಎರಡು ಕತ್ತೆಗಳನ್ನು ವಾಹನದಲ್ಲಿ ಕೆರೆದುಕೊಂಡು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡುತ್ತಿದ್ದೇವೆ. ಹೆಚ್ಚೆಂದರೆ ದಿನಕ್ಕೆ 800 ರಿಂದ 1000 ರೂ ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಹೀಗಾಗಿ ಕೃಷಿ ಕೆಲಸಗಳಿಗೆ ಕೂಲಿ ಹೋಗಿ ಜೀವನ ನಿರ್ವಹಣೆ ಮಾಡುತ್ತೇವೆ. ಕೃಷಿ ಕಸುಬು ಇಲ್ಲಿದ್ದಾಗ ಪಟ್ಟಣಗಳಿಗೆ ತೆರಳಿ ಕತ್ತೆ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆಯ ಮಾಲೀಕ ಕೋಲಾರದಿಂದ ಬಂದ ಪಡಿಯಪ್ಪ.

ಕೆ.ಸಿ.ಪಾಳ್ಯ, ಲಿಂಗಪ್ಪನಪಾಳ್ಯ, ಕಂಪನಹಳ್ಳಿ, ಗೌಡಗೆರೆ ಗ್ರಾಮಗಳಲ್ಲಿ ಕತ್ತೆಯ ಹಾಲು ಎಂದು ಕೂಗುತ್ತ ಶನಿವಾರ ಸಂಚರಿಸಿ ಮಾರಾಟ ಮಾಡಿದರು. ಆಸಕ್ತರು ಹಣ ನೀಡಿ ಸ್ಥಳದಲ್ಲಿಯೇ ತಮ್ಮ ಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಿದ್ದರು. ಒಟ್ಟಾರೆ ’ಕತ್ತೆಗೊಂದು ಕಾಲ’ ಎಂಬ ಮಾತು ಈಗ ಕತ್ತೆ ಹಾಲಿನ ಡಿಮ್ಯಾಂಡ್ ನೋಡಿ ಸತ್ಯ ಎನ್ನುವಂತಾಗಿದೆ.

Ashika S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

1 hour ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

2 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

2 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

3 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

4 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

4 hours ago