ಸಿಎಂ ಕುರ್ಚಿಗೆ ಪಟ್ಟುಬಿಡದ ಬಂಡೆ: ಇಂದು ಅದೃಷ್ಟದ ಆಟಕ್ಕೆ ತೆರೆ

ನವದೆಹಲಿ: 2020ರಲ್ಲಿ ಪಕ್ಷದ ಸಾರಥ್ಯವನ್ನು ಯಾರು ವಹಿಸಿಕೊಳ್ಳಲು ಸಿದ್ಧರಿಲ್ಲದ ವೇಳೆ ನಾನು ವಹಿಸಿಕೊಂಡು ಪಕ್ಷ ಬಹುಮತ ಗಳಿಸುವಂತೆ ಮಾಡಿದ್ದೇನೆ. ಹೀಗಾಗಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದಾರೆ.
ನನಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಇಲ್ಲದೇ ಹೋದಲ್ಲಿ ನೀವೇ ಮುಖ್ಯಮಂತ್ರಿ ಆಗಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ದಾಳ ಉರುಳಿಸಿದ್ದಾರೆ.

ಖರ್ಗೆ ಅವರನ್ನು ಭೇಟಿ ಮಾಡಿದ ಶಿವಕುಮಾರ್, ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸೋತಿತ್ತು ಎಂಬುದನ್ನು ಅವರಿಗೆ ವಿವರಿಸಿದ್ದಾರೆ. ಸಿಎಂ ಹುದ್ದೆ ನೀಡದಿದ್ದಲ್ಲಿ ಬೇರಾವುದೇ ಸ್ಥಾನ ಬೇಡ ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ ಎಂದು ಕಡ್ಡಿ ಮುರಿದಂತೆ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಇಷ್ಟೆಲ್ಲ ವಿವರಿದರೂ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನದ ಕುರಿತು ಯಾವುದೇ ಭರವಸೆ ಖರ್ಗೆ ಅವರ ಕಡೆಯಿಂದ ದೊರೆತಿಲ್ಲ ಎನ್ನಲಾಗಿದೆ. ಈ ನಡುವೆ ಬುಧವಾರ ಬೆಂಗಳೂರಿನಲ್ಲಿ ನೂತನ ಮುಖ್ಯಮಂತ್ರಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಮಾತುಕತೆ ಬಳಿಕ ರಾಹುಲ್ ಗಾಂಧಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಪಕ್ಷದ ಮುಖ್ಯಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಿತು.
ರಹಸ್ಯ ಮತದಾನದ ಆಧಾರದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಅವರು ಸಿಎಂ ಸ್ಥಾನವನ್ನು ನಿರ್ಧರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ರಹಸ್ಯ ಮತದಾನದಲ್ಲಿ ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಪರವಿದ್ದರೂ ಶಿವಕುಮಾರ್‌ ಮಣಿದಿಲ್ಲ. ಪಕ್ಷಕ್ಕೆ ಗೆಲುವು ತಂದುಕೊಟ್ಟ ಪಾಯಿಂಟ್‌ ಮುಂದಿರಿಸಿ ನನಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Umesha HS

Recent Posts

ಅನಿಮೇಟೆಡ್ ವಿಡಿಯೋ ‘ತಕ್ಷಣ’ ತೆಗೆದುಹಾಕುವಂತೆ ಬಿಜೆಪಿಗೆ ಚುನಾವಣಾ ಆಯೋಗ ಆದೇಶ

ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ…

20 mins ago

13 ವರ್ಷದ ಬಾಲಕಿ ಜೊತೆ 70ರ ವೃದ್ಧ ಮದುವೆ: ತಂದೆ, ವರ ಪೊಲೀಸರ ವಶಕ್ಕೆ

13 ವರ್ಷದ ಬಾಲಕಿಯನ್ನು  70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

1 hour ago

ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಶಿಕ್ಷಕರ ವಜಾಕ್ಕೆ ತಡೆ ನೀಡಿದ ಸುಪ್ರೀಂ

ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌…

1 hour ago

ಪ್ರಜ್ವಲ್ ನನ್ನು ದೇಶದಿಂದ ಆಚೆ ಬಿಟ್ಟು ನಮ್ಮಂತವರ ಬಂಧನ ಎಂದ ಕೆ. ಕವಿತಾ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಭಾರೀ ಸುದ್ದಿಯಾಗುತ್ತಿದ್ದು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಬರೀ ರಾಜ್ಯದಲ್ಲಷ್ಟೇ ಅಲ್ಲ…

2 hours ago

‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬೈಂದೂರಿನ ಕೆರಾಡಿಯಲ್ಲಿ…

2 hours ago

ಇವಿಎಂಗೆ ಬೆಂಕಿ ಹಚ್ಚಿದ ಯುವಕ: ಪೊಲೀಸರ ವಶಕ್ಕೆ

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ.

2 hours ago