ಸಂಪಾದಕರ ಆಯ್ಕೆ

ಹಾಸನ: ಹೊಳೆನರಸೀಪುರದಲ್ಲಿ ಶ್ರೇಯಸ್ ಪಟೇಲ್‌ಗೆ ಕೈ ಎತ್ತಿದ ಕಾಂಗ್ರೆಸ್ ಮುಖಂಡರು

ಹಾಸನ: ಹೊಳೆನರಸೀಪುರ ಅನ್ನೋ ಮಹಾನ್ ಜಿದ್ದಾಜಿದ್ದಿ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣರ ವಿರುದ್ದ ಸ್ಪರ್ಧೆಗೆ ಇಳಿಯೋ ಕಾಂಗ್ರೆಸ್ ಅಭ್ಯರ್ಥಿಗಳು ಬಲೀ ಕಾ ಬಕ್ರಾಗಳೇ..? ಇಲ್ಲಿ ಗೆಲುವು ಅಭಾದಿತ ಅನ್ನೋ ಶಾಶ್ವತ ನಿಲುವು ಹೊಂದಿರೋ ರೇವಣ್ಣ ವಿರುದ್ದ ಕಾಂಗ್ರೆಸ್‌ನ ಘಟಾನುಗಟಿಗಳು ಮುದುರಿ ಕುಳಿತು ಬಿಡುತ್ತಾರಾ..?. ತನ್ನ ಎದುರಾಳಿ ವಿರುದ್ದ ಪ್ರಚಾರಕ್ಕೆ ಬರುವವರಿಗೆ ತಡೆಯೊಡ್ಡುವ ರೇವಣ್ಣರ ಮಾಂತ್ರಿಕ ಶಕ್ತಿಗೆ ಅವರೆಲ್ಲಾ ನಡುಗಿ ಹೋಗ್ತಿ ದ್ದಾರಾ..? ಹೀಗೆನ್ನೋ ಹತ್ತು ಹಲವು ಪ್ರಶ್ನೆಗಳು ಹೊಳೆನರಸೀಪುರ ಕ್ಷೇತ್ರದಲ್ಲಿ ಹರಿದಾಡ್ತಾ ಇದೆ.

ಇದರ ಜೊತೆ ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತರಾಗಿದ್ದ ಜಿ. ಪುಟ್ಟಸ್ವಾಮಿ ಗೌಡರ ಹೆಸರು ಕೂಡ ಅಲ್ಲಲ್ಲಿ ಪ್ರತಿಧ್ವನಿಸುತ್ತಿರೋದು ಸದ್ಯದ ವಿಶೇಷ. ಪುಟ್ಟಸ್ವಾಮಿಗೌಡರ ನಂತರ ಜೆಡಿಎಸ್ ವಿರುದ್ದ ತೊಡೆ ತಟ್ಟಿ ಗೆಲ್ಲೋ ಮತ್ತೋರ್ವ ಗಂಡು ಇಲ್ಲಿ ಬರಲಿಲ್ಲ ಅನ್ನೋದೇ ಇದಕ್ಕೆ ಕಾರಣ. ಅದೆಂತಹ ರಣಪಟ್ಟುಗಳಿದ್ದರೂ ಲೀಲಾಜಾಲವಾಗಿ ಜಯಿಸಬಲ್ಲ ಹೆಚ್.ಡಿ ರೇವಣ್ಣರಿಗೆ ಗೆಲುವು ಅನ್ನೋದು ಬಾಳೆಹಣ್ಣು ಸುಲಿದಷ್ಟು ಸಲೀಸು.

ಸದ್ಯಕ್ಕೆ ಅವರ ವಿರುದ್ದ ರಾಜಕೀಯದ ಜಿದ್ದು ಸಾಧಿಸಿ ಗೆದ್ದು ಬರುವವರು ಯಾರೂ ಇಲ್ಲಾ ಅಂದ್ರೆ ಖಂಡಿತ ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹೊರತು ಪಡಿಸಿದರೆ ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಪ್ರಾಬಲ್ಯ ಅಷ್ಟಕಷ್ಟೇ. ಕ್ಷೇತ್ರ ಮರುವಿಂಗಡನೆ ನಂತರ ತನ್ನ ಶಕ್ತಿಯನ್ನ ದುಪ್ಪಟ್ಟು ಮಾಡಿ ಕೊಂಡಿರುವ ಜೆಡಿಎಸ್ ವಿರುದ್ದ ಅಕ್ಷರಷಃ ಹೆಚ್. ಡಿ ರೇವಣ್ಣರ ವಿರುದ್ದ ನಿಂತು ಇಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ.

ಇವೆಲ್ಲದರ ನಡುವೆ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಮಾತ್ರ ತನ್ನ ಉಮೇದು ವಾರಿಕೆಯನ್ನ ಸಲ್ಲಿಸುತ್ತಲೇ ಬಂದಿದೆ. ಹಿಂದಿನ ಚುನಾವಣೆ ಗಳಲ್ಲಿ ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾರನ್ನ ಕಣಕ್ಕಿಳಿ ಸಿದ್ದರೂ ಯಶಸ್ಸು ಸಾಧ್ಯವಾಗಲಿಲ್ಲ. ಆನಂತರ ಬಾಗೂರು ಮಂಜೇಗೌಡರ ಶಕ್ತಿ ವಿನಿಯೋಗಿಸೋ ಪ್ರಯತ್ನದಲ್ಲೂ ಕೂಡ ಸೋಲಾಯಿತು.

ಈಗ ಅದೇ ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ. ಈಗಲೂ ಸಹ ಬೆಂಬಲಕ್ಕೆ ನಿಲ್ಲಬೇಕಿದ್ದ ಕಾಂಗ್ರೆಸ್ ಧುರೀಣರು ಮಾತ್ರ ಇತ್ತ ತಲೆ ಹಾಕುತ್ತಿಲ್ಲಾ. ಭರವಸೆಯ ಭಯಂಕರ ಮಾತನಾಡಿದ್ದ ಮಾಜಿ ಸಿ.ಎಂ ಸಿದ್ದರಾಮಯ್ಯ, ಡಿ.ಕೆ ಬ್ರದರ್‍ಸ್ ಸೇರಿದಂತೆ ಯಾರೂ ಕೂಡ ಇತ್ತ ಸುಳಿಯದೇ ಇರುವುದು ಮತದಾರರ ಹುಬ್ಬೇರುವಂತೆ ಮಾಡಿದೆ. ಕಾಂಗ್ರೆಸ್ ನಾಯಕರ ಈ ಮೌನ ಜೆಡಿಎಸ್ ಪಾಳಯದಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಿರುವುದಂತೂ ಸುಳ್ಳಲ್ಲಾ.

Ashika S

Recent Posts

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು  ಮೇ 14ರಂದು ಆಸ್ಪತ್ರೆಯ ಎಮ್‍ಕಾಡ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.

36 seconds ago

ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊಂಕಣಿಯಲ್ಲಿ ಆರು ವಿದ್ಯಾರ್ಥಿಗಳಿಗೆ 100% ಅಂಕ

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿನ ಒಟ್ಟು ಆರು ವಿದ್ಯಾರ್ಥಿಗಳು…

22 mins ago

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ನಾಪತ್ತೆ

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ…

23 mins ago

ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್”

 ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್'ಫಿಲೇ…

33 mins ago

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ…

47 mins ago

ಇನ್‌ಸ್ಟಾ ಲೈವ್‌ಗೋಸ್ಕರ ಕಾರಿನ ಸ್ಪೀಡ್‌ ಹೆಚ್ಚಿಸಿದ ಸ್ನೇಹಿತ : ನಾಲ್ವರ ದುರ್ಮರಣ

ಇನ್‌ಸ್ಟಾಗ್ರಾಮ್‌ ಲೈವ್‌ ಮಾಡವುದಕ್ಕಾಗಿ ಸ್ನೇಹಿತ ಕಾರಿನ ವೇಗವನ್ನು ಹೆಚ್ಚಿಸಿದ್ದು ನಂತರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು ನಾಲ್ವರು ಸಾವನಪ್ಪಿದ್ದು…

52 mins ago