ಮುಂಬೈ: ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಸೋಮವಾರ ಮುಂಬೈನ ಸೊಲ್ಲಾಪುರದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ವರೆಗೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಚಾಲನೆ ಮಾಡಿದರು. ಏಷ್ಯಾದ ಮೊದಲ ಲೋಕೋ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸೆಂಟ್ರಲ್ ರೈಲ್ವೇಯ ವಿಶ್ವ ಪರಂಪರೆಯ ಪ್ರಧಾನ ಕ ಚೇರಿಯಾದ ಸಿಎಸ್ಎಂಟಿ ಪ್ಲಾಟ್ಫಾರ್ಮ್ ಸಂಖ್ಯೆ 8 ರಲ್ಲಿ ಯಾದವ್ ಅವರನ್ನು ರೈಲು ಅಧಿಕಾರಿಗಳು ಗೌರವಿಸಿದರು.
ಯಾದವ್ ಅವರು ವಂದೇ ಭಾರತ್ ರೈಲುಗಳಲ್ಲಿ ಒಳಗೊಂಡಿರುವ ಹೊಸ ಯುಗ, ಅತ್ಯಾಧುನಿಕ ತಂತ್ರಜ್ಞಾನದ ರೈಲನ್ನು ಚಾಲನೆ ಮಾಡುವ ಅವಕಾಶ ನೀಡಿದ್ದಕ್ಕೆ ಸಿಆರ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ರೈಲು ಸರಿಯಾದ ಸಮಯಕ್ಕೆ ಸೊಲ್ಲಾಪುರದಿಂದ ಹೊರಟು ಸಮಯಕ್ಕೆ ಐದು ನಿಮಿಷ ಮುಂಚಿತವಾಗಿ ಸಿಎಸ್ಎಂಟಿ ತಲುಪಿತು.
ಮಹಾರಾಷ್ಟ್ರದ ಸತಾರಾ ಮೂಲದ ಸುರೇಖಾ ಯಾದವ್ ಅವರು 1988 ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.
ಆಕೆಯ ಸಾಧನೆಗಾಗಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.