News Karnataka Kannada
Wednesday, May 01 2024
ಸಂಪಾದಕರ ಆಯ್ಕೆ

ರಾಜ್ಯದ ಶೇ. 66ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ : ಸಚಿವ ಕೆ.ಸುಧಾಕರ್

Dr.sudhakar
Photo Credit : News Kannada

ಬೆಂಗಳೂರು: ರಾಜ್ಯದಲ್ಲಿ 15 ರಿಂದ 18 ವರ್ಷ ವರ್ಗದ ಮಕ್ಕಳಲ್ಲಿ ಮೂರನೇ ಎರಡು ಭಾಗದಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ  ಎಂದು ಅರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಕೂನಲ್ಲಿ ಲಸಿಕೆ ಕುರಿತು ವಿಷಯ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ 15 ರಿಂದ 18 ವರ್ಷ ವರ್ಗದ ಮಕ್ಕಳಲ್ಲಿ ಮೂರನೇ ಎರಡು ಭಾಗದಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಜೊತೆಗೆ ಪ್ರತಿ ಜಿಲ್ಲೆಗಳಲ್ಲಿ ಎಷ್ಟು ಮಕ್ಕಳು ಲಸಿಕೆ ಪಡೆದಿದ್ದರೆ ಎನ್ನುವುದನ್ನು ತಿಳಿಸಿದ್ದಾರೆ.

ಇದರಲ್ಲಿ ಗದಗ ಜಿಲ್ಲೆ ಮಕ್ಕಳ ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿದ್ದು, ರಾಜ್ಯದ ಶೇ. 66ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಜಿಲ್ಲೆಯಲ್ಲಿ ಈ ವರ್ಗದ ಶೇ 99 ಮಕ್ಕಳು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ.

ಗುಲ್ಬರ್ಗ ಜಿಲ್ಲೆಯಲ್ಲಿ ಕೇವಲ ಶೇ 51ರಷ್ಟು ಮಕ್ಕಳು ಮಾತ್ರ ಮೊದಲ ಡೋಸ್ ಲಸಿಕೆ ಹೊಂದಿರುವುದರಿಂದ. ಜಿಲ್ಲೆ ಲಸಿಕೆ ಅಭಿಯಾನದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.

ಉಳಿದಂತೆ ಕೊಡಗು ಮತ್ತು ಉಡುಪಿಯಲ್ಲಿ ಶೇ 87, ಉತ್ತರ ಕನ್ನಡ ಶೇ 83, ಬೆಂಗಳೂರು ನಗರ, ದಕ್ಷಿಣ ಕನ್ನಡ ಶೇ 79, ಬಾಗಲಕೋಟೆ ಶೇ 77, ಶಿವಮೊಗ್ಗ ಶೇ 76, ಧಾರವಾಡ ಶೇ 75, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಶೇ 74, ಚಿಕ್ಕಮಗಳೂರು ಶೇ 73 ರಷ್ಟು ಲಸಿಕೆಯನ್ನು ನೀಡಿ ಮೊದಲ ಹತ್ತು ಸ್ಥಾನದಲ್ಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು