ಚೈನಾ ಚಾರ್ಟ್ ನಲ್ಲಿದೆ ಹುಟ್ಟುವ ಮಗುವಿನ ರಹಸ್ಯ!

ಹುಟ್ಟುವ ಮಗುವಿನ ಬಗೆಗಿನ ಕುತೂಹಲ ಇಂದು ನಿನ್ನೆಯದಲ್ಲ. ಮಾನವ ಸೃಷ್ಠಿಯಾದಂದಿನಿಂದ ಅದು ಮುಂದುವರೆದುಕೊಂಡು ಬಂದಿದೆ. ಇವತ್ತಿನಂತೆ ಆಧುನಿಕ ಯಾವುದೇ ತಂತ್ರಜ್ಞಾನಗಳು ಇಲ್ಲದ ಕಾಲದಲ್ಲಿ ಮನೆಯಲ್ಲಿ ಹುಟ್ಟುವ ಮಗು ಗಂಡಾಗುತ್ತಾ ಹೆಣ್ಣಾಗುತ್ತಾ ಎಂಬುದರ ಬಗ್ಗೆ ತಿಳಿಯಲು ಚೈನಾದಲ್ಲಿ ಚಾರ್ಟ್ ವೊಂದನ್ನು ಮಾಡಿದ್ದರಂತೆ. ಆ ಚಾರ್ಟ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಚೈನಾದವರು ಸುಮಾರು 700 ವರ್ಷಗಳ ಹಿಂದೆಯೇ ಹುಟ್ಟಲಿರುವ ಮಗುವನ್ನು ಅದು ಹೊಟ್ಟೆಯಲ್ಲಿರುವಾಗಲೇ ’ಚಾರ್ಟ್’ ಮೂಲಕ ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳುತ್ತಿದ್ದರಂತೆ. ಇದು ನಮಗೆ ಅಚ್ಚರಿಯಾದರೂ ಸತ್ಯ. ಇವತ್ತು ಚೀನಾದ ಬೀಜಿಂಗ್ ಸೈನ್ಸ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಭದ್ರವಾಗಿರುವ ’ಚೈನಾ ಚಾರ್ಟ್’ನ್ನು ಒಮ್ಮೆ ನೋಡಿದರೆ ಅರ್ಥವಾಗಿ ಬಿಡುತ್ತದೆ. ಈ ಚಾರ್ಟ್ ರಾಜನೊಬ್ಬನ ಸಮಾಧಿಯಲ್ಲಿ ಸಿಕ್ಕಿತೆನ್ನಲಾಗಿದೆ. ಶೇಕಡ 97ರಷ್ಟು ಚಾರ್ಟ್‌ನಲ್ಲಿ ನಮೂದಿಸಿದಂತೆಯೇ ಆಗಿದೆ ಎಂಬ ಹೆಗ್ಗಳಿಕೆಯೂ ಈ ’ಚೈನಾ ಚಾರ್ಟ್’ಗೆ ಇದೆ.

ಚಾರ್ಟ್‌ನ್ನು ನೋಡಿ ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳುವುದು ಕೂಡ ತುಂಬಾ ಸುಲಭ. ಚಾರ್ಟ್‌ನ ಮೇಲಿನ ಭಾಗದಲ್ಲಿ (ಎಡದಿಂದ ಬಲಕ್ಕೆ) ಜನವರಿಯಿಂದ ಡಿಸೆಂಬರ್‌ವರೆಗೆ 12 ತಿಂಗಳುಗಳನ್ನು ಹಾಗೂ ಕೆಳ ಭಾಗದಲ್ಲಿ (ಮೇಲಿನಿಂದ ಕೆಳಕ್ಕೆ) 18 ರಿಂದ 45ರವರೆಗೆ ಗರ್ಭಿಣಿ ಮಹಿಳೆಯ ವಯಸ್ಸನ್ನು ಬರೆಯಲಾಗಿದೆ. ಇಲ್ಲಿ ಒಟ್ಟು 336 ಚೌಕಳಿಯಿದ್ದು ಇದರಲ್ಲಿ ’ಗಂಡು(ಎಂ)’ ಮತ್ತು ’ಹೆಣ್ಣು(ಎಫ್)’ ಎಂದು ಸೂಚಿಸಲಾಗಿದೆ.

ಉದಾಹರಣೆಗೆ ಮಹಿಳೆಯೊಬ್ಬಳಿಗೆ 18 ವರ್ಷವಾಗಿದ್ದು, ಅವಳು ಜನವರಿಯಲ್ಲಿ ಋತುಚಕ್ರ ನಿಂತು ಗರ್ಭಿಣಿಯಾಗಿದ್ದರೆ ಆಕೆಗೆ ಹುಟ್ಟುವ ಮಗು ’ಹೆಣ್ಣು’ ಆಗುತ್ತದೆ. ಇನ್ನು ಗರ್ಭಿಣಿ ಮಹಿಳೆಗೆ 25 ವರ್ಷವಾಗಿದ್ದು, ಆಕೆ ಫೆಬ್ರವರಿಯಲ್ಲಿ ಗರ್ಭಿಣಿಯಾಗಿದ್ದರೆ ಆಗ ಆಕೆಗೆ ಹುಟ್ಟುವ ಮಗು ’ಗಂಡು’ ಆಗುತ್ತದೆ ಎಂದು ಹೇಳಲಾಗಿದೆ. ಇಷ್ಟಕ್ಕೂ ಇದೇ ಸತ್ಯ ಅಂತನೂ ಹೇಳಕ್ಕಾಗಲ್ಲ. ಆದರೆ ಹಿಂದಿನ ಕಾಲದಲ್ಲಿ ತಮ್ಮ ಕುತೂಹಲ ತಣಿಸಿಕೊಳ್ಳಲು ಇಂತಹವೊಂದು ಚಾರ್ಟ್‌ನ್ನು ತಯಾರಿಸಿದ್ದರಲ್ಲಾ ಎಂಬುವುದೇ ಕುತೂಹಲದ ಸಂಗತಿಯಾಗಿದೆ.

Gayathri SG

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

48 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

1 hour ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

2 hours ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

2 hours ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

2 hours ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago