ಕರ್ನಾಟಕ ಸಂಘ ಶಾರ್ಜ ದಿಂದ ಕೋವಿಡ್ 19 ಸಂತ್ರಸ್ತರ ನೆರವಿಗಾಗಿ ಒಂದು ಲಕ್ಷ ರೂ ಕೊಡುಗೆ

ಕರ್ನಾಟಕ ಸಂಘ ಶಾರ್ಜ (KSS) ಕಳೆದ ಸುಮಾರು 20 ವರ್ಷಗಳಿಂದ ಸಂಯುಕ್ತ ಅರಬ್ ಅಮೀರ ಶಾಹಿ (UAE) ಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಏಳಿಗೆ ಮತ್ತು ಇತರ ಮಾನವೀಯ ನೆಲೆಯಲ್ಲಿ ಅನಿವಾಸಿ ಕನ್ನಡಿಗರ ಸೇವೆ ಮಾಡುತ್ತಿರುವ, ರಕ್ತ ದಾನ, ಅರೋಗ್ಯ ಶಿಬಿರ, ಸಾಂಸ್ಕೃತಿಕ ಕೂಟ ಮೊದಲಾದ ಜನ ಹಿತ ಸೇವಾ ಕಾರ್ಯಗಳ ಮೂಲಕ ಸದಾ ಕನ್ನಡಿಗರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ಸೇವಾ ಸಂಸ್ಥೆ.
ಕೋವಿಡ್19 ಸಂಕ್ರಮಣದ ಪರಿಹಾರ ಕಾರ್ಯದಲ್ಲಿ ಯಾವುದೇ ಪ್ರಚಾರ ವಿಲ್ಲದೆ ಮೌನವಾಗಿ ತನ್ನನ್ನು ಸಕ್ರಿಯವಾಗಿ ಸಂಸ್ಥೆಯು ತೊಡಗಿಸಿಕೊಂಡಿದೆ. ಇದರ ಒಂದು ಭಾಗವಾಗಿ ಪ್ರಸ್ತುತ ಕರ್ನಾಟಕದ ಕೋವಿಡ್ 19 ಸಂತ್ರಸ್ತರ ನೆರವಿಗಾಗಿ ಸಂಸ್ಥೆಯ ವತಿಯಿಂದ ರೂಪಾಯಿ ಒಂದು ಲಕ್ಷವನ್ನು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರಿಗೆ ಇತ್ತೀಚಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಸಂಘದ ಪರವಾಗಿ ಸಂಸ್ಥೆಯ ಪೂರ್ವ ಅಧ್ಯಕ್ಷರೂ ಹಾಲಿ ಸಲಹೆಗಾರರೂ ಆದ ಶ್ರೀ ಸುಗಂಧ ರಾಜ್ ಬೇಕಲ್ ಮತ್ತು ಊರಲ್ಲಿರುವ ಸಂಸ್ಥೆಯ ಇತರ ಹಿತೈಷಿಗಳನ್ನೊಳಗೊಂಡ ನಿಯೋಗವು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮೊತ್ತವನ್ನು ಹಸ್ತಾಂತರಿಸಿತು. ಮಾನ್ಯ ಜಿಲ್ಲಾಧಿಕಾರಿಯವರು ಕರ್ನಾಟಕ ಸಂಘದ ಧೀರ್ಘಕಾಲದ ಜನಹಿತ ಸೇವಾ ಕಾರ್ಯವನ್ನು ಶ್ಲಾಘಿಸುತ್ತಾ ಕೋವಿಡ್19 ಸಂತ್ರಸ್ತರ ನೆರವಿಗೆ ಸಂಸ್ಥೆಯು ಅರ್ಪಿಸಿದ ದೇಣಿಗೆಯನ್ನು ಸ್ವೀಕರಿಸುತ್ತಾ ಕರ್ನಾಟಕ ಸರಕಾರದ ಪರವಾಗಿ ಧನ್ಯವಾದವನ್ನು ಹೇಳಿದರು ಹಾಗೂ ಸಾದರ ಸ್ವೀಕಾರದೊಂದಿಗೆ ಸರಕಾರದ ಪರವಾಗಿ ಪ್ರಶಂಸಾ ಪತ್ರವನ್ನು ನೀಡಿದರು. ಕರ್ನಾಟಕ ಸಂಘ ಶಾರ್ಜಾದ ಪರವಾಗಿ ಜಿಲ್ಲಾಧಿಕಾರಿಯವರಿಗೆ ಧನ್ಯವಾದ ಸಮರ್ಪಿಸಿದ ಶ್ರೀ ಸುಗಂಧ ರಾಜ ಬೇಕಲ್ ರವರು, ಕನ್ನಡ ನಾಡಿನ ಜನತೆಯ ಸೇವೆಯನ್ನೇ ತನ್ನ ಮುಖ್ಯ ಗುರಿಯಾಗರಿಸಿಕೊಂಡು ಕಳೆದ 20 ವರ್ಷಗಳಿಂದ ಸಾರ್ಥಕವಾದ ಬಹುಮುಖೀ ಜನಪರ ಸೇವೆಯನ್ನು ಗೈಯ್ಯುತ್ತಿರುವ ಕರ್ನಾಟಕ ಸಂಘ ಶಾರ್ಜಾ ಇನ್ನು ಮುಂದೆಯೂ ಕನ್ನಡ ನಾಡಿನ ಒಳಿತಿಗಾಗಿ ತನ್ನ ತನ್ನ ಸೇವಾ ಕೈಂಕರ್ಯವನ್ನು ಮುಂದುವರಿಸಲಿದೆ ಎಂದು ಹೇಳಿದರು.

 

Desk

Recent Posts

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

3 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

4 hours ago

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

4 hours ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

4 hours ago

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

4 hours ago

ಪಾದಯಾತ್ರೆ ನಡೆಸಿ ಮತಯಾಚಿಸಿದ ಶಾಸಕ ಅಶೋಕ್ ಮನಗೂಳಿ

ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.

4 hours ago