ಅಪ್ಲಿಕೇಶನ್ ತೆರೆಯದೆ ಧ್ವನಿ ಸಂದೇಶ ಕೇಳಲು ವಾಟ್ಸಾಪ್ ಹೊಸ ಫೀಚರ್‌ ಲಭ್ಯ

ವಾಟ್ಸಾಪ್ ತನ್ನ ಬಳಕೆದಾರರಿಗೆ ಚಾಟ್‌ಬಾಕ್ಸ್‌ನಿಂದ ಆಚೆಗೂ ಧ್ವನಿ ಸಂದೇಶಗಳನ್ನು ಓದಲು ಅನುಕೂಲವಾಗುವಂತೆ ವಾಟ್ಸಾಪ್ ಹೊಸ ಫೀಚರ್‌ ಒಂದನ್ನು ತರುತ್ತಿದೆ. ಸದ್ಯಕ್ಕೆ ಚಾಟ್‌ನಲ್ಲಿರುವಾಗ ಮಾತ್ರವೇ ನೀವು ಧ್ವನಿ ಸಂದೇಶವನ್ನು ನೋಡಬಹುದಾಗಿದೆ.

ಈ ಹೊಸ ಫೀಚರ್‌ ಮೂಲಕ ಬಳಕೆದಾರರು ಅಪ್ಲಿಕೇಶನ್ ಮಿನಿಮೈಜ್ ಮಾಡಿದಾಗಲೂ ಸಹ ಆಡಿಯೋವನ್ನು ಆಲಿಸಬಹುದಾಗಿದೆ. ಇದೇ ವೇಳೆ ಬಳಕೆದಾರರು ಒಂದು ಚಾಟ್‌ನಿಂದ ಮತ್ತೊಂದು ಚಾಟ್‌ಗೆ ಸ್ವಿಚ್ ಆದ ಮೇಲೆ ಹೀಗೆ ಆಡಿಯೋ ಕೇಳಲು ಬರದು. ಈ ಹೊಸ ಫೀಚರ್‌ ಅನ್ನು ವಾಟ್ಸಾಪ್‌ನ ಐಓಎಸ್‌ ವರ್ಷನ್ 22.4.75ನಲ್ಲಿ ಕಾಣಲಾಗುತ್ತಿದೆ. ಆದರೆ ಈ ಫೀಚರ್‌ನ ಆಂಡ್ರಾಯ್ಡ್‌ ಹಾಗೂ ವಾಟ್ಸಾಪ್‌ ವೆಬ್ ವರ್ಶನ್‌ಗಳ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಆಪಲ್ ಫೋನ್‌ಗಳಲ್ಲಿ ಕೆಳಗಿನಿಂದ ಹಾಗೇ ಸ್ವೈಪ್ ಮಾಡಿದರೆ ವಾಟ್ಸಾಪ್ ಅಪ್ಲಿಕೇಶನ್‌ ತನ್ನಿಂತಾನೇ ಮಿನಿಮೈಜ್ ಆಗುತ್ತದೆ. ಇದೇ ವೇಳೆ ವಾಟ್ಸಾಪ್‌ನಲ್ಲಿ ಬಂದ ಬೇರೆ ಸಂದೇಶಗಳನ್ನು ಓದಲು ಹೋದಾಗ ಧ್ವನಿ ಸಂದೇಶ ಪಾಸ್ ಆಗುತ್ತದೆ.

ಇದೇ ವೇಳೆ, ಮೆಟಾ ಮಾಲೀಕತ್ವದ ಸಂದೇಶ ರವಾನೆ ದಿಗ್ಗಜ ತನ್ನ ವಾಟ್ಸಾಪ್ ಕಮ್ಯೂನಿಟಿ ಫೀಚರ್‌ ಮೇಲೆ ಕೆಲಸ ಮಾಡುತ್ತಿದ್ದು, ಗ್ರೂಪ್‌ಗಳ ಅಡ್ಮಿನ್‌ಗಳಿಗೆ ಇನ್ನಷ್ಟು ನಿಯಂತ್ರಣ ನೀಡಲು ಬಯಸುತ್ತಿದೆ.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

4 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

4 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

5 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

5 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

6 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

6 hours ago