ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ಮಂಗಳೂರು-3ನೇ ಘಟಕದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್)ನಿಂದ ಕಟೀಲು/ಬೊಕ್ಕಪಟ್ಣ/ ಸ್ಟೇಟ್‍ಬ್ಯಾಂಕ್/ಕೋಡಿಕಲ್ ಮಾರ್ಗವಾಗಿ ನಗರ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಬಸ್ ವೇಳಾಪಟ್ಟಿ ಈ ರೀತಿಯಾಗಿದೆ
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕಟೀಲಿಗೆ ಬೆಳಗ್ಗೆ 6.55, 10.45, ವಯಾ: ಕೂಳೂರು-ಸುರತ್ಕಲ್-ಚೊಕ್ಕಬೆಟ್ಟು-ಕಾಟಿಪಳ್ಳ-ಶಿಬರೂರು-ಬಲವಿನಗುಡ್ಡೆ.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಬೊಕ್ಕಪಟ್ಣದಿಂದ ಬೆಳಗ್ಗೆ 8.45, 10.15, 11.45, ಮಧ್ಯಾಹ್ನ 1.30, 3.20, 5.00, 6.30, ವಯಾ ಕಂಕನಾಡಿ-ಜ್ಯೋತಿ-ಪಿವಿಎಸ್-ಲಾಲ್‍ಬಾಗ್-ಸುಲ್ತಾನ್‍ಬತ್ತೇರಿ-ಅಮೃತವಿದ್ಯಾಲಯ-ಬೋಳಾರ್.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್)ದಿಂದ ಸ್ಟೇಟ್‍ಬ್ಯಾಂಕ್‍ಗೆ 3, ಸಂಜೆ 5, ಮಧ್ಯಾಹ್ನ 1, 1.25, 2.40, ವಯಾ ಪಡೀಲ್-ಮರೋಳಿ-ನಂತೂರು-ಕದ್ರಿ-ಜ್ಯೋತಿ

ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕೋಡಿಕಲ್ ಬೆಳಗ್ಗೆ 8, 9, 9.50, 11, 12.15, 2.30, 3.30, ವಯಾ: ಪಡೀಲ್-ಮರೋಳಿ-ಕಂಕನಾಡಿ ಮಾರ್ಕೆಟ್-ಮಲ್ಲಿಕಟ್ಟೆ-ಕೆಪಿಟಿ-ಲಾಲ್‍ಬಾಗ್-ಉರ್ವಾಸ್ಟೋರ್-ಕೊಟ್ಟಾರ.

ಕೆಎಸ್‌ಆರ್‌ಟಿಸಿ ಪ್ರಕಟಣೆ
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.