ರಾಯಚೂರು: ಅಂತರ್ಜಾತಿ ವಿವಾಹಕ್ಕೆ ಯುವಕನ ಮನೆಯವರು ವಿರೋಧಿಸಿದ್ದಕ್ಕೆ ಮನನೊಂದ ಯುವತಿ ಸಾಂತ್ವನ ಕೇಂದ್ರದ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಅನುರಾಧಾ ಸಾವಿಗೀಡಾದ ಯುವತಿ. ಈ ಘಟನೆ ಜಲಾಲ್ ನಗರದಲ್ಲಿ ನಡೆದಿದೆ.
ಆಕೆ ವಿನಯ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗಲು ನಿರ್ಧಿರಿಸಿದ್ದರು. ಆದರೆ, ಮದುವೆಗೆ ಜಾತಿ ಅಡ್ಡಿಯಾಗಿದ್ದು, ಯುವಕನ ಮನೆಯವರು ವಿರೋಧಿಸಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ,ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣಕ್ಕೆ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆ ಕಟ್ಟಡದಿಂದಲೇ ಯುವತಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

