ಕರಿಮಣಿ ಸೀರಿಯಲ್ ನಿರ್ದೇಶಕ, ಸ್ಯಾಂಡಲ್‌ವುಡ್‌ನ ನಿರ್ಮಾಪಕ ವಿನೋದ್ ದೋಂಡಾಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕ ಬ್ಲೇಡ್ ಸಿನಿಮಾ ಮಾಡಲು ಕೋಟಿ ಕೋಟಿ ಹಣ ಹಾಕಿದ್ದ ನಿರ್ದೇಶಕ ಆತ್ಮಹತ್ಯೆ ನೇಣಿಗೆ ಶರಣಾಗಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆ ನಂತರ ವಿನೋದ್ ದೋಂಡಾಳೆಯವರ ಅಂತ್ಯಕ್ರಿಯೆ ನಡೆಯಲಿದೆ. ನಗರದ ಚಾಮರಾಜಪೇಟೆ ಟಿ.ಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಕಿರುತೆರೆ ನಟ, ನಟಿಯರು ವಿನೋದ್ ದೋಂಡಾಳೆಯವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ವಿನೋದ್ ದೋಂಡಾಳೆ ಮನೆಯ ಸೆಕೆಂಡ್ ಫ್ಲೋರ್ನಲ್ಲಿರೋ ಸಿಂಗಲ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದರು. ಆದರೀಗ ಇವರ ಸಾವು ಅನೇಕ ಚಿತ್ರನಟರಿಗೆ ಅರಿಗಿಸಿಕೊಳ್ಳಲಾಗುತ್ತಿಲ್ಲ.

