ಮೈಸೂರು: ಯುವತಿಗೆ ಕಾಂಗ್ರೆಸ್ ಮುಖಂಡನಿಂದ ಮೋಸವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಮದನ್ ರಾಜ್ ಕೈ ಕೊಟ್ಟಿದ್ದಾರೆ. ಯುವತಿಯನ್ನ ಪ್ರೀತಿಸಿ ದೈಹಿಕ ಸಂಪರ್ಕ ಬೆಳಸಿದ್ದ ಮದನ್ ರಾಜ್. ಈಗ ಮತ್ತೊಂದು ಯುವತಿಯ ಜೊತೆ ಏಂಗೆಜ್ಮೆಂಟ್ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದಿದೆ.
ಮದನ್ ರಾಜ್ ಪ್ರೀತಿ ನಂಬಿ ಮೇಘನಾ ಮೋಸ ಹೋಗಿದ್ದಾರೆ. ಮನನೊಂದ ಮೇಘನಾಳಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಬಳಿ ಆಪ್ತ ಮದನ್ ರಾಜ್ ಗುರುತಿಸಿಕೊಂಡಿದ್ದರು. ಮೇಘನಾಳನ್ನ ಪ್ರೀತಿಸಿ, ದೈಹಿಕ ಸಂಪರ್ಕ ಬೆಳಸಿ ಮದನ್ ರಾಜ್ ಮೋಸ ಮಾಡಿದ್ದಾರೆ.
ಇಬ್ಬರು ವಿಷ ಕುಡಿಯೊಣ ಎಂದು ನಂಬಿಸಿ ಮೇಘನಾಗೆ ವಿಷ ಕುಡಿಸಿದ್ದಾರೆ. ಮದನ್ ರಾಜ್ ಪ್ರೀತಿ ನಂಬಿ ವಿಷ ಕುಡಿದು ಮೇಘನಾ ಅಸ್ವಸ್ಥಳಾಗಿದ್ದಾಳೆ. ನಂತರ ಟಿ. ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇಘನಾ ಬಚಾವ್ ಆಗಿದ್ದಾರೆ. ಇದೀಗ ನ್ಯಾಯಕ್ಕಾಗಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಪತ್ತೆಗೆ ಟಿ. ನರಸೀಪುರ ಪೊಲೀಸರು ಬಲೆ ಬೀಸಿದ್ದಾರೆ.

