ಮೈಸೂರು : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯತೀಂದ್ರ ಚಾಲನೆ ನೀಡಿದರು. ವರುಣ ಕ್ಷೇತ್ರ ವ್ಯಾಪ್ತಿಯ ಯಡದೊರೆ, ಕುರಿಸಿದ್ದನಹುಂಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಿತು.
ಬಳಿಕ ಹಲವು ಗ್ರಾಮಗಳಿಗೆ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿದರು. ಯಡದೊರೆ, ಕುರಿಸಿದ್ದನಹುಂಡಿ ಗ್ರಾಮಕ್ಕೆ ಬರಲು ಸಂತೋಷ ಆಗುತ್ತದೆ. ನನಗು ನಮ್ಮ ತಂದೆಯವರಿಗೆ ಸಾಕಷ್ಟು ಪ್ರೀತಿ ನೀಡಿದ್ದೀರಾ. ಇದಲ್ಲದೆ ಚುನಾವಣೆಯಲ್ಲಿ ನಮ್ಮ ತಂದೆ ಹಾಗೂ ನನಗೆ ಬೆಂಬಲ ನೀಡಿದ್ದೀರಾ ಎಂದರು.
ಅತಿ ಹೆಚ್ಚಿನ ಮತ ನೀಡಿ ನಮ್ಮ ಗೆಲುವಿಗೆ ಸಹಕಾರ ಕೊಟ್ಟಿದ್ದೀರಾ. 2023ರ ಚುನಾವಣೆಯಲ್ಲೂ ಅತಿ ಹೆಚ್ಚಿನ ಮತ ನೀಡಿ ನಮ್ಮ ತಂದೆ ಗೆಲುವಿಗೆ ಕಾರಣರಾಗಿದ್ದೀರಾ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲು ಚಿರಋಣಿ ಆಗಿರುತ್ತೇನೆ. ಟಿ ನರಸೀಪುರದಲ್ಲಿ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.

