ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಹಿನ್ನಲೆ ಗಜಪಡೆ ತಾಲೀಮು ಆರಂಭಿಸಿದೆ. ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಇಂದಿನಿಂದ ತಾಲೀಮು ಆರಂಭಗೊಂಡಿದೆ.

ವಿಶ್ವ ಆನೆಗಳ ದಿನವೇ ತಾಲೀಮು ಆರಂಭವಾಗಿದ್ದು, ಅರಮನೆಯಿಂದ 7.30 ಕ್ಕೆ  ಗಜಪಡೆ ಹೊರಟಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತದಲ್ಲಿ 9 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿದೆ.

ಕೆ.ಆರ್ ವೃತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಸರ್ಕಲ್ ಬನ್ನಿ ಮಂಟಪ ರಸ್ತೆ ಮಾರ್ಗ ಹಳೆ ಆರ್ಎಂಸಿ ಮಾರುಕಟ್ಟೆ ವರಗೆ ತಲುಪಿ ಗಜಪಡೆ ವಾಪಸ್ ಆಗಿದೆ. ಆನೆ ಕಣ್ತುಂಬಿಕೊಳ್ಳಲು  ರಸ್ತೆ ಇಕ್ಕೆಲಗಳಲ್ಲಿ ನೂರಾರು ಜನ ಭಾಗಿಯಾಗಿದ್ದರು.

ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಗಜಪಡೆ ಸಾಗಿದೆ. ಮೊದಲ ಹಂತದಲ್ಲಿ ಸಾಮಾನ್ಯ ತಾಲೀಮು ನಡೆಯಿತು. ಕೆಲವು ದಿನಗಳ ಬಳಿಕ ಮರಳಿನ‌ ಮೂಟೆ ಹೊತ್ತು ತಾಲೀಮು ಸಾಗಿತು. ದಸರಾ ಸಮೀಪಿಸುತ್ತಿದ್ದಂತೆ ಮರದ ಅಂಬಾರಿ ತಾಲೀಮು ನಡೆಯಿತು. ಹಂತ ಹಂತವಾಗಿ ವಿವಿಧ ತಾಲೀಮಿನಲ್ಲಿ  ಗಜಪಡೆ ಭಾಗಿಯಾಗಲಿದೆ.