ಮೈಸೂರು: ಪತಿಯ ಹತ್ಯೆಗೆ ಪತ್ನಿ ಸ್ಕೆಚ್ ಹಾಕಿದ್ದು ಕೌಟುಂಬಿಕ ಕಲಹ ಎಂದು ಅಡಿಷನಲ್ ಎಸ್ಪಿ ನಾಗೇಶ್ ತಿಳಿಸಿದ್ದಾರೆ.

ಗಂಡನನ್ನ ಕೊಲೆ ಮಾಡಲು ರಾಬರಿ ತರ ಸ್ಕೆಚ್ ಹಾಕಿದ್ದಾರೆ. ತನಿಖೆ ಮಾಡುವಾಗ ಇದರ ಸತ್ಯ ತಿಳಿದು ಬಂದಿದೆ. ಕುಟುಂಬ ಕಲಹದಿಂದ ಗಂಡನನ್ನೇ ಮರ್ಡರ್ ಮಾಡಸಲು ಪತ್ನಿ ಮುಂದಾಗಿದ್ದಾಳೆ.

ಮದುವೆಯಾಗಿ 8 ವರ್ಷ ಆಗಿದೆ. ತಮ್ಮನಿಗೆ ಹೆಂಡತಿ ಸಹಾಯ ಮಾಡಿದ್ದಳು ಎಂದು ಗಂಡ ಸಹಿಸಲಾರದೆ ಅವಳನ್ನ ಅವಾಚ್ಯ ಶಬ್ದದಿಂದ ನಿಂದಿಸುತಿದ್ದ. ತಮ್ಮನಿಗೆ ಹೆಂಡತಿ ಕಾರು ಕೊಡಿಸಿರುತ್ತಾಳೆ ಗಂಡನು ಸಹ ನನ್ಗೂ ಕಾರು ಕೊಡಿಸು ಎಂದು ಕೇಳಿದ್ದನಂತೆ. ಅಕ್ಕನಿಗೆ ಬಾವ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದನ್ನ ಸಹಿಸಲಾರದೆ ತಮ್ಮ ಕೊಲೆ ಮಾಡಲಿಕ್ಕೆ ಮುಂದಾಗಿದ್ದಾನೆ.

ಬೆಂಗಳೂರಿನಿಂದ ಬಾಡಿಗೆ ಕಾರು ಮಾಡ್ಕೊಂಡು ಬಂದು ರಾಬರಿ ಮಾಡುವ ರೀತಿ ಕೊಲೆ ಮಾಡಲು ಯತ್ನಿಸಿದ್ದಾರೆ. ಪ್ರಕರಣದಲ್ಲಿ ನಾಲ್ಕು ಜನ ಆರೋಪಿ ಇದ್ದಾರೆ ಮೂವರನ್ನ ಬಂಧಿಸಿದ್ದೇವೆ. ಆಕೆಗೆ ಮೊದಲು ಮದುವೆ ಆಗಿ ಡೈವರ್ಸ್ ಆಗಿತ್ತ ಎಂಬುದು ಕೂಡ ತನಿಖೆ ಆಗುತ್ತಿದೆ. ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.