ಮೈಸೂರು: ಗಂಡನನ್ನು ಕೊಲೆ ಮಾಡಿ ಹೃದಯಾಘಾತ ಎಂದು ಹೆಂಡತಿ ಸುಶೀಲ ಕಥೆ ಕಟ್ಟಿದ್ದಾರೆ. ಮೃತ ನಿತ್ಯಾನಂದ ಅಣ್ಣಾ ಬಂದು ನೋಡಿದಾಗ ಕುತ್ತಿಗೆ ಭಾಗದಲ್ಲಿ ಗಾಯವಾಗಿರೋದು ಪತ್ತೆಯಾಗಿದೆ.
ಅನುಮಾನಗೊಂಡು ಪೊಲೀಸರಿಗೆ ನಿತ್ಯಾನಂದ ಅಣ್ಣಾ ದೂರು ನೀಡಿದರು. ಪ್ರಾಥಮಿಕ ತನಿಖೆಯಲ್ಲಿ ಹೆಂಡತಿ ಸತ್ಯ ಒಪ್ಪಿಕೊಂಡಿದ್ದಾರೆ. ಮಕ್ಕಳಿಲದ ಕಾರಣ, ಸಾಂಸಾರಿಕ ಕಲಹ, ಹಣಕಾಸು ಆಸ್ತಿ ವಿಚಾರಕ್ಕೆ ಜಗಳವಾಗುತ್ತಿತ್ತು ಈ ಹಿನ್ನಲೆ ಸುಶೀಲ ಕೊಲೆ ಮಾಡಿದ್ದಾರೆ.
ಪ್ರತಿನಿತ್ಯ ಡ್ರಿಂಕ್ಸ್ ಮಾಡ್ತಿದ್ದ ನಿತ್ಯಾನಂದ. ನಿನ್ನೆ ರಾತ್ರಿಯು ಡ್ರಿಂಕ್ಸ್ ಪಾರ್ಟಿ ಮಾಡಿ ನಿತ್ಯಾನಂದ ಮನೆಗೆ ಹೋಗಿದ್ದರು.ರಾತ್ರಿ ಕುಡಿದ ಮತ್ತಿನಲ್ಲಿ ಮಲಗಿರುವಾಗ ಕುತ್ತಿಗೆ ಭಾಗಕ್ಕೆ ಹಗ್ಗ ಹಾಕಿ ಪತ್ನಿ ಸುಶೀಲ ಸಾಯಿಸಿದ್ದಾರೆ. ಬೆಳಿಗ್ಗೆ ತುಂಬ ಹೊತ್ತು ಮನೆಯಿಂದ ಸುಶೀಲ ಹೊರ ಬರಲಿಲ್ಲ. ನಿತ್ಯಾನಂದ ಫೋನ್ ಗೆ ಕರೆ ಮಾಡಿದ್ರು ಉತ್ತರಿಸಿದ ಹಿನ್ನಲೆ ಮನೆಗೆ ಹುಡುಕಿಕೊಂಡು ಸ್ನೇಹಿತ ದರ್ಶನ್ ಬಂದು ಹೋಗಿದ್ದರು.
ಎಸ್ಟೇ ಬಾಗಿಲು ಬಡಿದರು ಸುಶೀಲ ತೆಗೆಯಲಿಲ್ಲ. ಬಳಿಕ ನಿತ್ಯಾನಂದ ಅಣ್ಣನಿಗೆ ಕರೆ ಮಾಡಿ ನಿಮ್ಮ ತಮ್ಮನಿಗೆ ಹೃದಯಾಘಾತವಾಗಿದೆ ಎಂದು ಸುಶೀಲ ವಿಷಯ ತಿಳಿಸಿದ್ದಾರೆ.

