ಮೈಸೂರು: ಯಾರ ಬಗ್ಗೆಯಾಗಲಿ ಮಾತನಾಡುವಾಗ ಏಕ ವಚನದಲ್ಲಿ ಮಾತನಾಡಬಾರದು ಮಾಜಿ ಸಚಿವ ಸಾ ರಾ ಮಹೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಇಡೀ ರಾಜ್ಯದ ಇತಿಹಾಸದಲ್ಲಿ ಬಹಳಷ್ಟು ರಾಜಕಾರಣಿಗಳು ಒತ್ತುವರಿ ಮಾಡಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಯಾವುದಾದರು ಒಂದು ಪ್ರಕರಣವನ್ನು ಎಸ್ ಐ ಟಿ ಗೆ ಕೊಟ್ಟಿರಲಿಲ್ಲ. ಆದರೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತೆ ಮಾತ್ರ ಎಸ್ ಐ ಟಿ ಗೆ ವಹಿಸಿದ್ದಾರೆ ಎಂದರು.
ಇದು ದ್ವೇಷದ ರಾಜಕಾರಣವಾಗಿದೆ. ಹಲವಾರು ರಾಜಕಾರಣಿಗಳ ಮೇಲೆ ಬಹಳಷ್ಟು ಆರೋಪಗಳು ಇವೆ. ಆದರೆ ಕುಮಾರಸ್ವಾಮಿ ಅವರ ಮೇಲೆ ಮಾತ್ರ ಏಕೆ ಕ್ರಮಕ್ಕೆ ಮುಂದಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡ್ತಿದ್ದಾರೆ ನಿಖಿಲ್ ಮಂಡ್ಯದಲ್ಲಿ ಐದುವರೆ ಲಕ್ಷ ಮತ ಪಡೆದಿದ್ದಾರೆ. ಅಷ್ಟೊಂದು ಮತವನ್ನು ಕಾಂಗ್ರೆಸ್ ನ ಯಾವುದೇ ನಾಯಕ ಪಡೆದಿಲ್ಲ. ಎಸ್ ಐ ಆರ್ ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಹಾಗಾದರೆ ಕಾಂಗ್ರೆಸ್ ನವರು 2023 ರ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬ ಅನುಮಾನ ಕಾಡ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ ನವರು ಯಾಕೆ ಆತಂಕಗೊಂಡಿದ್ದಾರೆ. ಕುಮಾರಸ್ವಾಮಿ ಆದಾಯದ ಕುರಿತು ಇವರೇನು ಆಲುಗೆಡ್ಡೆ ಬೆಳೆದು ಸಂಪಾದಿಸಿದ್ದಾರಾ ಎಂದು ಕೇಳಿದ್ದಾರೆ. ಕುಮಾರಸ್ವಾಮಿ ರಾಜಕೀಯಕ್ಕೆ ಬರುವ ಮುನ್ನಾ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಕಾಂಗ್ರೆಸ್ ನಾಯಕರುಗಳೇನು ಭತ್ತ ಬೆಳೆದಿದು ಆಸ್ತಿ ಮಾಡಿದ್ದಾರಾ? ಕಾಂಗ್ರೆಸ್ ನವರು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಡಬೇಕು ಎಂದರು.
ರಾಜಕಾರಣದಲ್ಲಿ ಯಾರು ಕೂಡ ಪ್ರಾಮಾಣಿಕರಲ್ಲ. ನಾವೆಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. ಎಲ್ಲರೂ ಸತ್ಯ ಒಪ್ಪಿಕೊಳ್ಳಬೇಕು. ಜೆಡಿಎಸ್ ಗಿಂತ ಅತಿ ಹೆಚ್ಚು ಭ್ರಷ್ಟರು ಕಾಂಗ್ರೆಸ್ ನಲ್ಲಿ ಇದ್ದಾರೆ. ರಾಜ್ಯದ ಜನರಿಗೂ ಎಲ್ಲಾ ಗೊತ್ತಿದೆ. ಜನರು ಮುಂದಿನ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

