ಮೈಸೂರು : 109 ವರ್ಷದ ಎಂಕೆ ಹಾಸ್ಟೆಲ್ ಮೇಲೆ ವಕ್ಫ್ ನೋಟಿಸ್ ವಿಚಾರವಾಗಿ ವಕ್ಫ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ನೋಟಿಸ್ ಅಂಟಿಸಿ ಈ ಅಸ್ತಿ ನಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ ಎಂದರು.
ಮೈಸೂರಿಗೆ ಮಹರಾಜ ಹಿನ್ನಲೆ ಇದೆ. ಅದರ ಹೊರತು ಹೈದರಾಲಿ, ಟಿಪ್ಪುಸುಲ್ತಾನ ಇತಿಹಾಸವಿಲ್ಲ. ವಕ್ಫ್ ಮಂಡಳಿ ಅವರು ಖಾಸಗಿ ಅಸ್ತಿ ಎಲ್ಲಾ ನನ್ನದು ಎಂದು ಕಬಳಿಕೆ ಮಾಡುತ್ತಿದ್ದಾರೆ.
ಈ ಕಾರಣದಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್ ತಿದ್ದುಪಡಿಯನ್ನು ತಂದಿದ್ದು. ವಕ್ಫ್ ವಕ್ಫ್ ಅಂತ ರೈತರ ನಮ್ಮ ಜನರ ಆಸ್ತಿ ಕಬಳಿಸುತ್ತಿದ್ದಾರೆ. ವಕ್ಫ್ ಬೋರ್ಡ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

