ಮೈಸೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗ ನಂಬಿಸಿ ಚಿನ್ನ ಗಿರವಿ ಇಟ್ಟುಕೊಂಡು ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ ಸ್ಟಾರ್ ಗೋಲ್ಡ್ ಕಂಪನಿ ಮಾಲೀಕನನ್ನ ಬಂಧಿಸುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯನಗರ 2ನೇ ಹಂತ ತ್ರಿನೇತ್ರ ಸರ್ಕಲ್ ಬಳಿ ಇರುವ ಸ್ಟಾರ್ ಗೋಲ್ಡ್ ಕಂಪನಿ ಅಂಗಡಿ ತೆರೆದು ಅತೀ ಕಡಿಮೆ ಬಡ್ಡಿ ದರದಲ್ಲಿ ಚಿನ್ನ ದ ಮೇಲೆ ಅತೀ ಹೆಚ್ಚು ಸಾಲ ಕೊಡುವುದಾಗಿ ಗ್ರಾಹಕರನ್ನು ನಂಬಿಸಿ ಅವರು ಅಡಮಾನ ಇರಿಸಿದ ಚಿನ್ನ ವನ್ನು ಅಕ್ರಮವಾಗಿ ತನ್ನ ಲಾಭಕ್ಕಾಗಿ ಗ್ರಾಹಕರ ಗಮನಕ್ಕೆ ತರದೇ ಕರಗಿಸಿ ಒಳಗೊಳಗೇ ಮಾರಾಟ ಮಾಡಿ ಸುಮಾರು 15 ಜನರಿಗೆ ಮೋಸ ಮಾಡಿ ಸುಮಾರು 850 ಗ್ರಾಂ ಚಿನ್ನ ಪಲಟಾಯಿಸಿ ಸುಮಾರು 1.5 ಕೋಟಿ ಹಣ ದುರ್ಲಾಭ ಮಾಡಿ ಕೊಂಡು ತಲೆ ಮರೆಸಿಕೊಂಡಿದ್ದ.
ಪ್ರಕರಣ ದಾಖಲಾಗಿ ಎರಡೂವರೇ ತಿಂಗಳ ನಂತರ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರು ನ್ಯಾಯಾಲಯ ಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದೆ.
2025 ರ ನವೆಂಬರ್ ನಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ, ನಂಬಿಕೆದ್ರೋಹ ಕಲಂ 314, 316, 317, 316(2), 318(4), 319, 3(5)ರಂತೆ ಕ್ರೈಂ ನಂಬರ್ 161/2025 ರೀತ್ಯಾ ಕೇಸು ದಾಖಲಾಗಿ ಹಲವಾರು ಬಾರಿ ತನಿಖೆ ಗೆ ಹಾಜರಾಗಲು ನೋಟೀಸ್ ನೀಡಿದ್ದರೂ ಸಹ ತನಿಖೆ ಗೆ ಹಾಜರಾಗದೆ ಆರೋಪಿ ತಲೆ ಮರೆಸಿಕೊಂಡಿದ್ದ. ಚಿನ್ನದ ಬೆಲೆ ಗಗನಕ್ಕೆ ಏರಿರಿರುವ ಸಂದರ್ಭದಲ್ಲಿ ಸಾರ್ವಜನಿಕರು ಇಂತಹ ವಂಚನೆ ಗಳಿಂದ ಎಚ್ಚರಿಕೆ ಯಿಂದ ಇರುವ ಪೊಲೀಸರು ಮನವಿ ಮಾಡಿದ್ದಾರೆ.

