ಮೈಸೂರು : ಸಿಎಂ ತವರಲ್ಲಿ ಕೈ ಮುಖಂಡನ ಕಾಮದಾಟದ ವಿಡಿಯೋ ವೈರಲ್ ಆಗಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಲೋಹಿತ್ ಎಂಬಾತನ ಮೇಲೆ ದೂರು ದಾಖಲಾಗಿದೆ.
ಶಾಸಕ ರವಿಶಂಕರ್ ಆಪ್ತ ಎನ್ನಲಾದ ಲೋಹಿತ್. ಮಾಯಿಗೌಡನಹಳ್ಳಿ ಗ್ರಾಮದ ಸೋಮೇಗೌಡ ಎಂಬವರ ಮೂಲಕ ದೂರು ನೀಡಲಾಗಿದೆ. ಹಾಡ್ಯ ಗ್ರಾಮದ ಯುವತಿ ಜೊತೆ ಕಾಮದಾಟದ ವಿಡಿಯೋ ವೈರಲ್ ಆಗಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಗ್ರಾಮದ ಲೋಹಿತ್ @ ರಾಜಿ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ತಿಂಗಳ ಹಿಂದಷ್ಟೇ ಯುವತಿಗೆ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ವೈಯ್ಯಕ್ತಿಕ ಲಾಭಕ್ಕಾಗಿ ವಿಡಿಯೋ ಹರಿಬಿಟ್ಟಿದ್ದಾರೆಂದು ಯುವತಿ ತಂದೆ ದೂರು ನೀಡಿದ್ದಾರೆ.
ಜಮೀನಿನ ವಿಚಾರಕ್ಕೆ ದ್ವೇಷ ಮಾಡುತ್ತಿದ್ದ. ಈಗ ಮಗಳ ಜೊತೆಗಿನ ಖಾಸಗಿ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾನೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತಕ್ಷಣ ಆತನನ್ನ ಅರೆಸ್ಟ್ ಮಾಡುವಂತೆ ಯುವತಿ ಹೆಸರಿನಲ್ಲಿ ತಂದೆ ದೂರು ನೀಡಿದ್ದಾರೆ. ನನಗೂ ಹಾಗು ನನ್ನ ಮಗಳಿಗೆ ನ್ಯಾಯ ಕೊಡಿಸಿ ಅಂತ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಲೋಹಿತ್ ಎಸ್ಕೇಪ್ ಆಗಿದ್ದಾರೆ.

