ಮೈಸೂರು: ಮಾ.22 ರಂದು ಕರ್ನಾಟಕ ಬಂದ್ ಹಿನ್ನಲೆ, ಕೆಎಸ್ಆರ್ಟಿಸಿ ಬಸ್ ಚಾಲಕರು, ನಿರ್ವಾಹಕರನ್ನ ವಾಟಾಳ್ ನಾಗರಾಜ್ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಭೇಟಿ ಮಾಡಿದರು.

ಮಾ.22 ರ ಬಂದ್ ಗೆ ಬೆಂಬಲ ಕೊಡುವಂತೆ ಮನವಿ ಮಾಡಿದರು. ನಿಮ್ಮ ಜೊತೆ ನಾವಿದ್ದೇವೆ ಹೋರಾಟದಲ್ಲಿ ಭಾಗಿಯಾಗಿ ಎಂದು ವಾಟಾಳ್ ನಾಗರಾಜು ಆತ್ಮ ಸ್ಥೈರ್ಯ ತುಂಬಿದರು.

ಮಾ.22 ಕ್ಕೆ ಕರ್ನಾಟಕ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ. ಈಗಾಗಲೇ ಬಹುತೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ. ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ, ಎಂ.ಇ.ಎಸ್ ನಿಷೇದ ಮಾಡಬೇಕು. ಕಳಸಾ-ಭಂಡೂರಿ ಮಹದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು ಎಂದರು.

ಹಿಂದಿ ಹೇರಿಕೆ ಬೇಡವೇ ಬೇಡ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟ‌ರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು, ಮೇಕೆದಾಟು ಬಗ್ಗೆ ತಮಿಳುನಾಡು ವಿರೋಧ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಮಾರ್ಚ್ 22 ರಂದು ಕರ್ನಾಟಕ ಬಂದ್ ಬೆಳಿಗ್ಗೆ 6-00 ಗಂಟೆಯಿಂದ ಸಂಜೆ 6-00 ಗಂಟೆವರೆಗೆ ಬಂದ್ ಮಾಡಲಾಗುವುದು
ಕನ್ನಡಿಗರು ಈ ಬಂದ್ ಗೆ ಕೈಜೋಡಿಸಬೇಕು ಎಂದರು.

ಸಮಗ್ರ ಕನ್ನಡಿಗರಿಗಾಗಿ, ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಕರ್ನಾಟಕ ಬಂದ್ ಮಾಡಲಾಗುತ್ತದೆ. ಬೆಳಗಾವಿ ಯಿಂದ ಚಾಮರಾಜನಗರ ವರೆಗೆ ಬಂದ್, ಬೆಳಗಾವಿ ಕನ್ನಡಿಗರ ಕೈಯಲ್ಲಿ ಇಲ್ಲ ಮರಾಠಿಗರ ಕೈಯಲ್ಲಿ ಇದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೇಕಾಗಿಲ್ಲ ಎಂದು ಸರ್ಕಾರ ಒತ್ತಾಯ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಎಂಇಎಸ್ ಇರಬಾರದು. ಬೆಳಗಾವಿ ಉಳಿಸಬೇಕು. ಬಸ್ ಚಾಲಕರಿಗೆ ಕನ್ನಡದ ಭೂಮಿಯಲ್ಲಿ ಚಾಲಕರಿಗೆ ಹೊಡೆದಿದ್ದಾರೆ ಎಂದರು.

ಚಾಲಕರು ಈ ಬಂದ್ ನಲ್ಲಿ ವಾಹನಗಳನ್ನು ಚಾಲನೆ ಮಾಡಬಾರದು, ರಾಜ್ಯಪಾಲರಾಗಲಿ, ಮುಖ್ಯಮಂತ್ರಿಯಾಗಲಿ ಚಾಲಕರು ಕಾರಿನಲ್ಲಿ ಕುಳಿತುಕೊಳ್ಳಬಾರದು. ಕನ್ನಡಪರ ಸಂಘಟನೆಗಳಲ್ಲಿ ಮನವಿಯನ್ನು ಮಾಡಿದ್ದೇನೆ.‌ ಮತ್ತೊಮ್ಮೆ ಕರೆಯುತ್ತೆನೆ. ಚಿತ್ರರಂಗ ಸಂಪೂರ್ಣ ಬಂದ್ ಆಗುತ್ತದೆ ಎಂದು ನಂಬಿದ್ದೇನೆ.

ನಟ ನಟಿಯರನ್ನು ಮನವಿಯನ್ನು ಮಾಡುತ್ತೇನೆ.‌ ಪರ ಭಾಷೆ ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಮಲಗಿದೆ, ವರ್ಷದಲ್ಲಿ ಮೂರು ದಿನ ಒಬ್ಬಟ್ಟು ಊಟ ಮಾಡಿ ಮಲಗುತ್ತಾರೆ. ಸಾಹಿತಿಗಳು ಬೆಂಬಲ ಕೊಡಬೇಕು ಎಂದು ಮೈಸೂರಿನ‌ಲ್ಲಿ ವಾಟಾಳ್ ನಾಗರಾಜು ಹೇಳಿಕೆ ನೀಡಿದ್ದಾರೆ.