ಮೈಸೂರು: ವಾಸ್ತು ಗಣಪತಿ ವಿಗ್ರಹದ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ವರ್ತನೆ ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ಹೈವೇ ವೃತ್ತದ ಬಳಿ ನಡೆದಿದೆ.
ಗಾಯಗೊಂಡ ವ್ಯಕ್ತಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಹಲ್ಲೆ ನಡೆಸಿದ ಪುರುಷೋತ್ತಮ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇದರಕೇರಿ ಬ್ಲಾಕ್ ನ ನಿವಾಸಿ ವಿಜಯಕುಮಾರ್ ಹಲ್ಲೆಗೆ ಒಳಗಾದವರು.
ಖಾಸಗಿ ಹೋಟೆಲ್ ಮುಂದೆ ವಾಸ್ತುಗಾಗಿ ಗಷಪತಿ ವಿಗ್ರಹ ಸ್ಥಾಪನೆ ಮಾಡಲಾಗಿದೆ.ವಿಗ್ರಹದ ಮುಂದೆ ಪುರುಷೋತ್ತಮ್ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನ ಆಟೋ ಡ್ರೈವರ್ ವಿಜಯ್ ಕುಮಾರ್ ಪ್ರಶ್ನಿಸಿದ್ದಾರೆ.
ಕ್ಷಮಿಸಿ ತಪ್ಪಾಯ್ತು ಎಂದು ಹೇಳಿ ಹೋದ ಪುರುಷೋತ್ತಮ್ ಮತ್ತೊಬ್ಬ ವ್ಯಕ್ತಿಯನ್ನ ಕರೆಸಿ ಕಾರ್ ಕೀಯಿಂದ ವಿಜಯ್ ಕುಮಾರ್ ತಲೆಗೆ ಚುಚ್ಚಿದ್ದಾನೆ. ಈ ವೇಳೆ ಮಂಡಿ ಠಾಣೆ ಪೊಲೀಸರು ಆಗಮಿಸಿದ್ದಾರೆ.
ತೀವ್ರ ಗಾಯಗೊಂಡ ವಿಜಯ್ ಕುಮಾರ್ ಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪುರುಷೋತ್ತಮ್ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

