ಮೈಸೂರು: ಎಸ್.ಎ.ಎ ಸಂಸ್ಥೆಯ ಜಾಗತಿಕ ರಾಕಿಂಗ್ ಪ್ರಕ್ರಿಯೆನಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿನ 100 ಅತ್ಯುತ್ತಮ ಮೌಲ್ಯವುಳ್ಳ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ಯವಿದ್ಯಾನಿಲಯಕ್ಕೆ ಸ್ಥಾನ 27 ನೇ ಸ್ಥಾನ ಲಭಿಸಿದೆ.
ವಿದೇಶಿ ವಿದ್ಯರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯವು ಗುಣಮಟ್ಟದ ಶಿಕ್ಷಣ ಒದಗಿಸುವ ನೆಚ್ಚಿನ ಜ್ಞಾನತಾಣವಾಗಿ ಹೊರಹೊಮ್ಮಿದ್ದು, ಜಾಗತಿಕವಾದ ಕಲಿಕಾ ವಾತಾವರಣವನ್ನು ಕಲ್ಪಿಸುವ ಮೂಲಕ, ಹೊರದೇಶದ ವಿದ್ಯಾರ್ಥಿಗಳಿಗೆ ಹೊಸ ಸಾಧ್ಯತೆಗಳನ್ನು ಹಾಗೂ ಅವಕಾಶಗಳನ್ನು ಸೃಷ್ಟಿಸುತ್ತಿರುವ ವಿಶ್ವವಿದ್ಯಾನಿಲಯದ ಪ್ರಯತ್ನವನ್ನು ಗುರುತಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯವು 27ನೇ ಸ್ಥಾನ ಪಡೆದಿರುವುದು ಅಭಿಯಾನದ ಸಂಗತಿಯಾಗಿದ್ದು, ಎಸ್. ಎ. ಎ ಸಂಸ್ಥೆಯ ಮಾರ್ಗಸೂಚಿಯನ್ವಯ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ಸಮರ್ಪಕವಾಗಿ ಬಿಂಬಿಸಿದ ವಿಶ್ಯವಿದ್ಯಾನಿಲಯದ ಐ.ಕ್ಯು.ಐ.ಎ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ವಿಶೇಷವಾಗಿ ಶ್ಲಾಘಿಸುತ್ತದೆ. ವಿದೇಶಿ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ, ಬೆಂಬಲ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿರುವ ವಿಶ್ವವಿದ್ಯಾನಿಲಯದ ‘ಅಂತರಾಷ್ಟ್ರೀಯ ಕೇಂದ್ರ’ದ ನಿರ್ದೇಶಕರು ಮತ್ತು ಸಿಬ್ಬಂದಿಗಳ ಕೊಡುಗೆ ಅಪಾರ ಮುಂದುವರಿದಿದೆ.
ವಿಶ್ವವಿದ್ಯಾನಿಲಯದ ಈ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕರು ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳು, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಎಂದು ಕುಲಪತಿ ಎಂ.ಎಸ್ಸಿ.ಪಿ.ಎಚ್.ಡಿ. ಪ್ರೊ.ಎನ್.ಕೆ. ಲೋಕನಾಥ್ ಅವರು ತಿಳಿಸಿದ್ದಾರೆ.

