ಮೈಸೂರು: ಎಂ.ಕೆ ಸವಿತಾ ಎಂಬುವವರು ಮೈಸೂರು ವಿವಿ ಕುಲಸಚಿವರು. ಆದ್ರೆ ಅವರು ಇಲ್ಲೇ ಪಿ.ಹೆಚ್.ಡಿ ಮಾಡ್ತಿದ್ದಾರೆ. ಅವರಿಗೆ ಅವರೇ ಸಹಿ ಮಾಡೋದು. ಇದು ಈ ಸರ್ಕಾರದ ಆಡಳಿತ. ವಿಶ್ವ ವಿದ್ಯಾನಿಲಯಗಳು ಕುಲಗೆಟ್ಟು ಹೋಗಿದೆ ಎಂದು ಮೈಸೂರು ವಿವಿ ಆಡಳಿತ ವೈಖರಿ ವಿರುದ್ಧವೂ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದರು.

ವಿವಿ ಯಲ್ಲಿ ದುಡ್ಡಿಲ್ಲ, ಸರ್ಕಾರದಲ್ಲಿ ದುಡ್ಡಿಲ್ಲ, 170 ಜನರಿಗೆ ಶಿಷ್ಯ ವೇತನ ಕೊಟ್ಟಿಲ್ಲ, ಕೇವಲ 20 ಜನರಿಗೆ ಶಿಷ್ಯ ವೇತನ ಕೊಟ್ಟಿದ್ದಾರೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಶಿಕ್ಷಣದ ಗುಣಮಟ್ಟ ಏರಿಸುವಲ್ಲಿ ವಿಫಲವಾಗಿದೆ. ಕೇವಲ ಬಿಲ್ಡಿಂಗ್ ಕಟ್ಟಿ ಹಣ ಮಾಡಿ, ಇದಕ್ಕಾಗಿ ಕುಲಪತಿಗಳು ಕುಲಸಚಿವರು ನಿಂತಿದ್ದಾರೆ ಮೈಸೂರು ವಿವಿ ಆಡಳಿತ ವೈಖರಿ ವಿರುದ್ಧವೂ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದರು.