ನಂಜನಗೂಡು: ಜೂ.14 ರಂದು ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿರುವ ರಾಜಕೀಯ ಜಾಗೃತಿಗಾಗಿ ಶೋಷಿತ ಸ್ಥಳ ಸಮುದಾಯಗಳ ಐಕ್ಯತಾ ಸಮಾವೇಶದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಗೊಳಿಸಿದರು‌. ನಂತರ ದಸಂಸ ಜಿಲ್ಲಾ ಉಪ ವಿಭಾಗೀಯ ಸಂಚಾಲಕ ಮಂಜು ಶಂಕರಪುರ, ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಎಸ್ ಐ ಆರ್ ಚುನಾವಣೆ ಪ್ರಕ್ರಿಯಯು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಆರ್ಥಿಕವಾಗಿ ಬಡತನದ ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವ ಹುನ್ನಾರವಾಗಿದೆ.

ರಾಜ್ಯದಲ್ಲಿ ಜಾರಿಮಾಡಲು ಹೊರಟಿರುವ ಎಸ್ ಐಆರ್ ಚುನಾವಣಾ ಪ್ರಕ್ರಿಯೆ ಬಗ್ಗೆ ಶೋಷಿತ ತಳಸಮುದಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ರಸ್ತುತ ಬೇರೆ ರಾಜ್ಯದ ಚುನಾವಣೆಯನ್ನು ಗಮನಿಸಿದಾಗ ಎಸ್ ಆರ್ ಐ ಯಿಂದ ಬಿಜೆಪಿಯು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಇದು ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿ ವತಿಯಿಂದ ಜೂ.14 ರಂದು ಬುದ್ಧ, ಬಸವ, ಅಂಬೇಡ್ಕರ್ ರವರ ಜಯಂತೋತ್ಸವ ಅಂಗವಾಗಿ ರಾಜಕೀಯ ಜಾಗೃತಿಗಾಗಿ ಶೋಷಿತ ತಳ ಸಮುದಾಯಗಳ ಐಕ್ಯತಾ ಸಮಾವೇಶವನ್ನು ನಂಜನಗೂಡಿನ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲಾ ಪ್ರಗತಿಪರ, ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್, ದಸಂಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್, ರಾಜ್ಯ ಗೌರವಾಧ್ಯಕ್ಷ ಗೀಕಹಳ್ಳಿ ಮಹದೇವಸ್ವಾಮಿ, ದಸಂಸ ಹಿರಿಯ ಮುಖಂಡ ದೇವರಸನಹಳ್ಳಿ ಮಹದೇವಸ್ವಾಮಿ, ಬೊಕ್ಕಹಳ್ಳಿ ಲಿಂಗಯ್ಯ, ರಾಜಶೇಖರ್ ಶೇಖಿ, ಕರ್ನಾಟಕ ಭೀಮ್ ಸೇನೆಯ ಕಾರ್ಯಾಧ್ಯಕ್ಷ ಕಣೇನೂರು ಚಂದ್ರು, ಜಿಲ್ಲಾಧ್ಯಕ್ಷ ಸತೀಶ್ ರಾವ್, ಇಮ್ಮಾವು ರಘು, ಪ್ರತಿಧ್ವನಿ ವೇದಿಕೆಯ ಅಧ್ಯಕ್ಷ ತ್ರಿನೇಶ್,

ಕರ್ನಾಟಕ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ, ಉಪ ವಿಭಾಗೀಯ ಸಂಘಟನಾ ಸಂಚಾಲಕರಾದ ಮರಿಸ್ವಾಮಿ, ಅರ್ಜುನ್ ಬೆಳಗುಂದ, ದಸಂಸ ತಾಲ್ಲೂಕು ಸಂಚಾಲಕ ಮಾಕನಪುರ ನಟೇಶ್, ಸಂಘಟನಾ ಸಂಚಾಲಕರಾದ ಸಿದ್ದೇಗೌಡನಹುಂಡಿ ಸುರೇಶ್, ಎಂ.ಮಹೇಶ್, ಹೊಳೆಯಪ್ಪ, ಮಹೇಶ್ ಗಟ್ಟವಾಡಿಪುರ, ಗಜೇಂದ್ರ ಖಜಾಂಚಿ ಡಿ.ಸಿ.ಸುರೇಶ್, ನಾಗೇಂದ್ರ, ಶಿವರಾಜು, ಸಿದ್ದರಾಜು, ಮಂಜು, ಮಾದಪ್ಪ, ಸೋಮಣ್ಣ, ಚೆಲುವರಾಜು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.