ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ವಿಚಾರವಾಗಿ ಮೈಸೂರಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ‌ ಹೇಳಿಕೆ ನೀಡಿದ್ದಾರೆ. ನಾನೂ ಕೂಡ ಒಂದು ಬಾರಿ ಉಸ್ತುವಾರಿ ಸಚಿವನಾಗಿ ನಿರ್ವಹಿಸಿದ್ದೇನೆ. ನಂಬಿಕೆಗೆ ಮತ್ತೊಂದು‌ ಹೆಸರು ಚಾಮುಂಡಿ ಬೆಟ್ಟ. ರಾಜ್ಯ‌  ಸರ್ಕಾರ ಪದೇ ಪದೇ ಯಡವಟ್ಟು ಮಾಡ್ತಿದೆ ಎಂದರು.

ಉದ್ಘಾಟಕರ‌ ಬಗ್ಗೆ ವಿ.ಸೋಮಣ್ಣ‌ ಆಕ್ಷೇಪ ವ್ಯಕ್ತಪಡಿಸಿದ್ದು,  ಸಾಮಾಜಿಕ,‌ ಧಾರ್ಮಿಕವಾಗಿ ಪೂರ್ವಜರು‌ ನೀಡಿದ ರೀತಿ ನಡೆದುಕೊಳ್ಳಿ. ಯಾರನ್ನೋ ತೃಪ್ತಿಪಡಿಸಲು ಈ ರೀತಿ ಮಾಡುವುದು ಸರಿಯಲ್ಲ. ಯಾರನ್ನ ಮಾಡಿದ್ದೀರಿ ಅವರಿಗೆ ತಾಯಿಯ ಮೇಲೆ ಗೌರವ ಇರಬೇಕು. ಅವರು ಎಷ್ಟರ ಮಟ್ಟಿಗೆ ಅರ್ಹರು ಎಂಬುದನ್ನ ಚರ್ಚಿಸಲ್ಲ. ಸರ್ಕಾರ ಉದ್ಘಾಟಕರ ವಿಚಾರದಲ್ಲಿ ಗೊಂದಲ ಮಾಡಬಾರದು. ಶಿಷ್ಠಾಚಾರವನ್ನ ರಾಜ್ಯ ಸರ್ಕಾರ ಪಾಲಿಸಬೇಕು ಎಂದರು.

ಸರ್ಕಾರಕ್ಕೆ ಸದ್ಭುದ್ಧಿ‌ ಕೊಡಲಿ ಅಂತ ಬೇಡಿಕೊಳ್ತೀನಿ. ತಾಯಿ ಮನಸು‌ ಗೆದ್ದರೆ ರಾಜ್ಯಕ್ಕೂ‌ಒಳಿತು, ಸರ್ಕಾರಕ್ಕೂ ಒಳಿತು. ನಂಜನಗೂಡು ಭಾಗದಲ್ಲಿ ಸೇತುವೆಗಳ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಗೊಂದಲವಿದೆ. ಆ ಕಾರಣಕ್ಕೆ‌ ನಾನೇ ಖುದ್ದು ನಂಜನಗೂಡಿಗೆ ತೆರಳುತ್ತಿರುವೆ ಎಂದರು.