ಮೈಸೂರು: ಅಪರಾಧ ಪತ್ತೆ ದಳ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳಾ ರಾಜ್ಯದ ಲಾಟರಿ ಟಿಕೆಟ್ ಗಳನ್ನ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅರುಣ್ ಕುಮಾರ್@ಅರುಣ್ ಹಾಗೂ ಸ್ವಾಮಿ ಬಂಧಿತರು.ಬಂಧಿತರಿಂದ ಒಟ್ಟು 55,200/- ರೂ ಮೌಲ್ಯದ ಲಾಟರಿಗಳನ್ನ ಹಾಗೂ 22,930/- ರೂ ನಗದು ವಶಪಡಿಸಿಕೊಂಡಿದ್ದಾರೆ. ಅಡಿಷನಲ್ ಎಸ್ಪಿ ಮಲ್ಲಿಕ್ ರವರಿಗೆ ದೊರೆತ ಖಚಿತ ಮಾಹಿತಿ ಅನುಸರಿಸಿದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಪಿರಿಯಾಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕೇರಳಾ ರಾಜ್ಯದ ಲಾಟರಿ ಟಿಕೆಟ್ ಗಳನ್ನ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಪಿರಿಯಾಪಟ್ಟಣದ ವೆಂಕಟೇಶ್ವರ ವೇ ಬ್ರಿಡ್ಜ್ ಬಳಿಯ ಸೌದೆಡಿಪೋ ಹತ್ತಿರ ಅರುಣ್ ಎಂಬುವರು ಲಾಟರಿ ಮಾರಾಟ ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ.ಅರುಣ್ ರಿಂದ 33 ಸಾವಿರ ಮೌಲ್ಯದ ಲಾಟರಿ ಟಿಕೆಟ್ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಪಿರಿಯಾಪಟ್ಟಣದ ಸಿಂಚನ ಹೋಟೆಲ್ ನಲ್ಲಿ ಸ್ವಾಮಿ ಎಂಬಾತ ಲಾಟರಿ ಮಾರುತ್ತಿದ್ದು ಸಿಕ್ಕಿಬಿದ್ದಿದ್ದಾನೆ.ಈತನಿಂದ 33 ಸಾವಿರ ಮೌಲ್ಯದ ಲಾಟರಿ ಟಿಕೆಟ್ ಗಳು ಹಾಗೂ 2930/- ನಗದು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ,ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗೋವಿಂದರಾಜು ಹಾಗೂ ಪಿಎಸ್ಸೈ ಜಗದೀಶ್ ನೇತೃತ್ವದಲ್ಲಿ ಎಎಸ್ಸೈ ಸತೀಶ್ ಸಿಬ್ಬಂದಿಗಳಾದ ಅಬ್ದುಲ್ ಲತೀಫ್,ಅಶೋಕ್,ಭಾಸ್ಕರ್ ರವರು ದಾಳಿಯನ್ನ ಯಶಸ್ವಿಗೊಳಿಸಿದ್ದು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

