ನಂಜನಗೂಡು: ಗೋ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಹುಲ್ಲಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಮದ್ ಹಾಗೂ ಅಯೂಬ್ ಖಾನ್ ಬಂಧಿತ ಆರೋಪಿಗಳು. ಹುಲ್ಲಹಳ್ಳಿಯ ಜೆಎಸ್ ಎಸ್ ಕಾಲೇಜಿನ ಹಿಂಬಾಗ ಶೆಡ್ ಒಂದರಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಹುಲ್ಲಹಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ದಾಳಿ ನಡೆಸಿದಾಗ ಆರೋಪಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

34 ಕೆಜಿ ದನದ ಮಾಂಸ, ಕಬ್ಬಿಣದ ಕೊಕ್ಕೆ, ಚೂರಿ, ಸತಾರ್, ತಕ್ಕಡಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.