ಮೈಸೂರು: ಕೊನೆಗೂ ನಂಜನಗೂಡು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕಪಿಲಾ ನದಿ ದಂಡೆಯ ಸರ್ಕಾರಿ ಜಮೀನಿನಲ್ಲಿ ಬೆಳೆದಿದ್ದ ಭಾರಿ ಮರಗಳಿಗೆ ಕೊಡಲಿ ಹಾಕಿದ ಆರೋಪಿಯೊಬ್ಬನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಲತ್ತೂರು ಗ್ರಾಮದ ಕೃಷ್ಣ(45) ಬಂಧಿತ ಆರೋಪಿ.ಮಾರ್ಚ್ 8 ರಂದು ಹೆಜ್ಜಿಗೆ ಗ್ರಾಮ ಕಪಿಲಾ ನದಿ ದಂಡೆಯಲ್ಲಿ ಬೆಳೆದಿದ್ದ 45 ವಿವಿದ ಜಾತಿಯ ಮರಗಳನ್ನ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಡಿದುಹಾಕಲಾಗಿತ್ತು.ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು.
ಪ್ರಕರಣ ನಡೆದು ಹಲವು ದಿನಗಳಾದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾರ್ಚ್ 10 ರಂದು ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದ್ದರು.ಘಟನೆ ನಡೆದು 17 ದಿನಗಳ ನಂತರ ಎಚ್ಚೆತ್ತ ಅಧಿಕಾರಿಗಳು ಓರ್ವನನ್ನ ಬಂಧಿಸಿದ್ದಾರೆ.

