ಗುಂಡ್ಲುಪೇಟೆ: ಕರ್ನಾಟಕದಲ್ಲಿರುವ 05 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಂಭವಿಸಬಹುದಾದ ಅರಣ್ಯ ಮೊಕದ್ದಮೆಗಳನ್ನು ಭೇದಿಸುವುದಕ್ಕೆ ಸಹಕಾರಿಯಾಗುವಂತೆ ಒಟ್ಟು 12 ಟ್ರಾಕರ್ ಡಾಗ್ ಗಳನ್ನೊಗೊಂಡ ಐದೂ ಹುಲಿ ಸಂರಕ್ಷಿತ ಪ್ರದೇಶಗಳ ಒಟ್ಟು 20 ಸಿಬ್ಬಂದಿಗಳ ತಂಡವನ್ನು ರಚಿಸಿ.
ತರಬೇತಿ ನೀಡುವುದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ತರಬೇತಿ ಕೇಂದ್ರವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ಕೆನೆಲ್ ಗಳನ್ನು ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾಲತಿ ಪ್ರಿಯ, ಡಾ. ರಮೇಶ್ಕುಮಾರ್ ಉದ್ಘಾಟಿಸಿದರು.
ಈ ವೇಳೆ ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಪಿ. ನವೀನ್ಕುಮಾರ್, ವಲಯ ಅರಣ್ಯಾಧಿಕಾರಿ ಬಿ. ಎಂ. ಮಲ್ಲೇಶ್, ಡಾಗ್ಗುರು ಎಂದು ಪ್ರಸಿದ್ದಿಯಾಗಿರುವ ಅಮೃತ್ ಶ್ರೀಧರ ಹಿರಣ್ಯ ಮತ್ತು ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಿಂದ ತರಬೇತಿಗೆ ಆಯ್ಕೆಯಾಗಿರುವ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಸ್ತುತ ಒಟ್ಟು 08 ಟ್ರಾಕರ್ ನಾಯಿಗಳನ್ನು ಬರಮಾಡಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

