ಮೈಸೂರು: ಇಂದು ಆಷಾಢ ಶುಕ್ರವಾರ ಹಿನ್ನೆಲೆ ನಾಡ ದೇವತೆ ಸನ್ನಿಧಿಯಲ್ಲಿ ಭಕ್ತರ ದಂಡು ಸೇರಿದ್ದು, ಬರುವಂತಹ ಭಕ್ತಾಧಿಗಳಿಗೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಭಾರಿ ಗಾತ್ರದ ಸ್ವಾಗತ ಕಮಾನು ಅಳವಡಿಕೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಿಗೆ ಪ್ರತ್ಯೇಕ ಬಸ್ ತಂಗುದಾಣದ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಬಸ್ ಗಳ ಮೂಲಕ ಬೆಟ್ಟಕ್ಕೆ ಬರಲು ಅವಕಾಶ ನೀಡಲಾಗಿದೆ. ಮುಂಜಾನೆ5.30 ರಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗೆ ಸರದಿ ಸಾಲಿನಲ್ಲಿ ಹೋಗಲು ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯ ಭಕ್ತರು, ಮೆಟ್ಟಲುಗಳ ಮೂಲಕ ಬರುತ್ತಾರೆ, 2000 ರೂ ಟಿಕೆಟ್ ಪಡೆದ ಭಕ್ತರಿಗೆ ಪ್ರತ್ಯೇಕ ಕ್ಯೂ ಲೈನ್ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 3.30 ಕ್ಕೆ ಪ್ರಧಾನ ಅರ್ಚಕರಿಂದ ಪೂಕಾ ಕೈಂಕರ್ಯ ಆರಂಭವಾಗಿದೆ.

5.30 ರಿಂದ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಮಹಿಷಾಸುರ ಪ್ರತಿಮೆ ವರಗೆ ಮಾತ್ರ ವಿಐಪಿ ವಾಹನ ಬರಲು ಅವಕಾಶ ನೀಡಲಾಗಿದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ದೇವಾಲಯದ ಬಳಿ ಹೋಗಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಒಟ್ಟು 1588 ಪೊಲೀಸರ ನಿಯೋಜನೆ ಮಾಡಲಾಗಿದೆ. ಡಿಐಜಿ 1,ಡಿಸಿಪಿ 4, ಎಸಿಪಿ 12, ಪಿಐ 31, ಪಿಎಸ್ಐ 67, ಎಎಸ್ಐ 115, ಎಚ್.ಸಿ 329, ಪಿಸಿ 729,ಹೋಂ ಗಾರ್ಡ್ 300 ಒಟ್ಟು 1588 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಸಿರು ಬಣ್ಣದ ಸೀರೆ, ನಾಗಶೇಷ ( ನಾಗಲಕ್ಷ್ಮಿ) ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದೆ.